ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗೆ ಸಂಘಟನೆ ಅಗತ್ಯ

ಶೆಫರ್ಡ್ಸ್ ಇಂಡಿಯಾ ಇಂಟರ್‌ನ್ಯಾಷನಲ್: ಪದಾಧಿಕಾರಿಗಳ ಆಯ್ಕೆ
Last Updated 23 ಅಕ್ಟೋಬರ್ 2020, 2:25 IST
ಅಕ್ಷರ ಗಾತ್ರ

ಬೇತಮಂಗಲ: ‘ಕುರುಬ ಸಮುದಾಯವು ಎಸ್‌ಟಿ ಮೀಸಲಾತಿ ಪಡೆದುಕೊಳ್ಳಲು ಪ್ರತಿ ಹಳ್ಳಿಯಲ್ಲಿಯೂ ಬಲಿಷ್ಠವಾಗಿ ಸಂಘಟಿತವಾಗಬೇಕಿದೆ’ ಎಂದು ಶೆಫರ್ಡ್ಸ್ ಇಂಡಿಯಾ ಇಂಟರ್‌ನ್ಯಾಷನಲ್‌ನ ಜಿಲ್ಲಾ ಅಧ್ಯಕ್ಷ ಸಿ. ಸೋಮಶೇಖರ್‌
ಹೇಳಿದರು.

ಗ್ರಾಮದ ಹೊಸ ಬಡಾವಣೆಯ ಶೆಫರ್ಡ್ಸ್ ಇಂಡಿಯಾ ಇಂಟರ್‌ನ್ಯಾಷನಲ್ ಕೆಜಿಎಫ್ ತಾಲ್ಲೂಕು ಕಚೇರಿಯಲ್ಲಿ ಆಯೋಜಿಸಿದ್ದ ತಾಲ್ಲೂಕು ಮತ್ತು ಹೋಬಳಿಮಟ್ಟದ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಲ್ಲೂಕು ಪದಾಧಿಕಾರಿಗಳು: ಜಿಲ್ಲಾ ಉಪಾಧ್ಯಕ್ಷರಾಗಿ ಬಡಮಾಕನಹಳ್ಳಿ ಮಂಜುನಾಥ್, ತಾಲ್ಲೂಕು ಉಪಾಧ್ಯಕ್ಷರಾಗಿ ಬಡಮಾಕನಹಳ್ಳಿ ಚಿರಂಜೀವಿ, ತಾಲ್ಲೂಕುಗೌರವಾಧ್ಯಕ್ಷ ಗೋವಿಂದಪ್ಪ, ಕಾರ್ಯದರ್ಶಿಯಾಗಿ ಶಂಕರಪ್ಪ, ಬಿ.ಸಿ. ಶಿವು, ಪ್ರಧಾನ ಕಾರ್ಯದರ್ಶಿಯಾಗಿ ಬೆಟ್ಟೂರು ಶ್ರೀನಿವಾಸ್ ಅವರನ್ನು ಆಯ್ಕೆ ಮಾಡಲಾಯಿತು.

ಹೋಬಳಿ ಪದಾಧಿಕಾರಿಗಳು: ಬೇತಮಂಗಲ ಹೋಬಳಿ ಅಧ್ಯಕ್ಷರಾಗಿ ಮಂಜುನಾಥ್, ಉಪಾಧ್ಯಕ್ಷರಾಗಿ ಉಜ್ಜನಪ್ಪ, ಸಿದ್ದಪ್ಪ, ಕಾರ್ಯದರ್ಶಿಯಾಗಿ ಬಡಮಾಕನಹಳ್ಳಿ ಗಣೇಶ್, ಸಂಘಟನಾ ಕಾರ್ಯದರ್ಶಿಯಾಗಿ ಶಿವಣ್ಣ, ಕ್ಯಾಸಂಬಳ್ಳಿ ಹೋಬಳಿ ಅಧ್ಯಕ್ಷರಾಗಿ ಗಣೇಶ್, ರಾಬರ್ಟ್‌ಸನ್‌ಪೇಟೆ ಹೋಬಳಿಯ ಅಧ್ಯಕ್ಷರಾಗಿ ಶಿವಾನಂದ್ ಆಯ್ಕೆಯಾದರು.

ತಾಲ್ಲೂಕು ಅಧ್ಯಕ್ಷ ಮಾರಸಂದ್ರ ಬಾಬು, ಮುಖಂಡ ಅಮರೇಶ್, ಅಂಗಡಿ ನಾರಾಯಣಸ್ವಾಮಿ, ಬಿಬಿಟಿ ಬತ್ತೆಪ್ಪ, ನಾಗೇಶ್, ಗಂಗರಾಜ್, ಜಗೇಶಪ್ಪ, ಬಿಎಚ್‍ಎಂ ರವಿ, ಎಸ್‍ವಿಟಿ ನಾಗೇಶ್ ಬಾಬು, ಬಿಎಂಟಿಸಿ ನಾರಾಯಣಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT