ಸೋಮವಾರ, ಜನವರಿ 20, 2020
21 °C

ಕೆರೆ ಒತ್ತುವರಿ ತೆರವಿಗೆ ಜಿಲ್ಲಾಧಿಕಾರಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಕೋಟೆ: ಅಗಸನಕೆರೆ ಒತ್ತುವರಿ ಬಗ್ಗೆ ಸಾರ್ವಜನಿಕರ ದೂರಿನ ಮೇರೆಗೆ ಜಿಲ್ಲಾಧಿಕಾರಿ ರವೀಂದ್ರ ನೇತೃತ್ವದ ತಂಡ ವರದಾಪುರ ಹಾಗೂ ನಗರದ ಸಾರ್ವಜನಿಕ ಆಸ್ಪತ್ರೆ ಹಿಂಭಾಗದಲ್ಲಿ ಪರಿಶೀಲನೆ ನಡೆಸಿತು.

ಕೆರೆ ಮತ್ತು ಸರ್ಕಾರಿ ಜಾಗವನ್ನು ತಕ್ಷಣ ಸರ್ವೆ ಮಾಡಿಸಬೇಕು. ಖಾಲಿ ಇರುವ ಜಾಗದಲ್ಲಿ ಬೇಲಿ ಹಾಕಿಸಬೇಕೆಂದು ತಹಶೀಲ್ದಾರ್ ಗೀತಾ ಅವರಿಗೆ ಸೂಚಿಸಿದರು. ಪ್ರತಿನಿತ್ಯ ಈ ಪ್ರದೇಶದಲ್ಲಿ ಪರಿಶೀಲಿಸಿ ಯಾವುದೇ ಹೊಸ ಒತ್ತುವರಿ ಆಗದಂತೆ ಗಮನಿಸುವಂತೆ ನಗರಸಭೆ ಆಯುಕ್ತ ನಿಸಾರ್ ಆಹಮದ್ ಅವರಿಗೆ ಸೂಚಿಸಿದರು. 

ಮುಂದಿನ 15 ದಿನಗಳಲ್ಲಿ ಸರ್ವೆ ಕಾರ್ಯ ಮುಗಿಸಿ ಅತಿಕ್ರಮಣ ಮಾಡಿರುವವರಿಗೆ ನೋಟಿಸ್ ನೀಡುವುದಾಗಿ ತಹಶೋಲ್ದಾರ್ ಗೀತಾ ತಿಳಿಸಿದರು. ಸಿಇಒ ಸಯದ್ ಜಾವೀದ್, ಕಂದಾಯ ಇನ್‌ಸ್ಪೆಕ್ಟರ್‌  ಮಲ್ಲಿಕಾರ್ಜುನ್, ಜನಜಾಗೃತಿ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ವರದಾಪುರ ನಾಗರಾಜ್ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು