ವರ್ಷದಲ್ಲಿ 131 ಹೆಕ್ಟೇರ್ ವಿಸ್ತರಣೆ
ಕೆಲ ವರ್ಷದಿಂದ ಮಾರುಕಟ್ಟೆಯಲ್ಲಿ ರೇಷ್ಮೆಗೂಡಿಗೆ ಉತ್ತಮ ಬೆಲೆ ಬಂದಿದೆ. ಹೀಗಾಗಿ ಜಿಲ್ಲೆಯ ರೈತರು ರೇಷ್ಮೆ ಸಾಕಾಣಿಕೆಯಲ್ಲಿ ಒಲವು ತೋರಿದ್ದಾರೆ. ಕಳೆದ ವರ್ಷ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 5070 ಹೆಕ್ಟೇರ್ ಪ್ರದೇಶ ಹಿಪ್ಪುನೇರಳೆ ಸೊಪ್ಪಿನ ತೋಟದ ಪ್ರದೇಶ ಇದ್ದರೆ ಪ್ರಸ್ತುತ ವರ್ಷ 131 ಹೆಕ್ಟೇರ್ ವಿಸ್ತರಣೆಗೊಂಡು 5201 ಹೆಕ್ಟೇರ್ ಪ್ರದೇಶ ಹೊಂದಿದೆ.