ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಾನದಲ್ಲಿ ಹಾವುಗಳ ಕಾಟ

Published 3 ಆಗಸ್ಟ್ 2023, 13:31 IST
Last Updated 3 ಆಗಸ್ಟ್ 2023, 13:31 IST
ಅಕ್ಷರ ಗಾತ್ರ

ವಿಜಯಪುರ: ಪಟ್ಟಣದ ಉದ್ಯಾನಗಳಲ್ಲಿ ಮೂಲ ಸೌಕರ್ಯ ಕೊರತೆ ಕಾಡುತ್ತಿದ್ದು, ವಾಯುವಿಹಾರಿಗಳು ತೊಂದರೆ ಅನುಭವಿಸುವಂತಾಗಿದೆ.

ಪಟ್ಟಣದ ಮಂಡಿಬೆಲೆ ರಸ್ತೆಯಲ್ಲಿ ಉದ್ಯಾನದಲ್ಲಿ ಮೂಲ ಸೌಕರ್ಯವು ಇಲ್ಲ. ಉದ್ಯಾನದ ನಿರ್ವಹಣೆಯನ್ನು ಮಾಡುತ್ತಿಲ್ಲ. ಇದರಿಂದ ಪಾರ್ಕ್‌ನಲ್ಲಿ  ಹಾವು, ಚೇಳುಗಳ ಕಾಟ ಹೆಚ್ಚಾಗಿದೆ. ಸಾರ್ವಜನಿಕರು ಆತಂಕದಲ್ಲೇ ವಾಯುವಿಹಾರ ಮಾಡುವಂತಾಗಿದೆ.

ಅಲ್ಲದೆ, ಉದ್ಯಾನದಲ್ಲಿರುವ ಮಕ್ಕಳ ಆಟದ ಪರಿಕರಗಳು ಹಾಳಾಗಿವೆ. ವಿದ್ಯುತ್‌ ದೀಪವಿಲ್ಲ, ಶುದ್ಧ ಕುಡಿಯುವ ನೀರಿನ ಘಟಕವಿದ್ದರು ಪ್ರಯೋಜನೆ ಇಲ್ಲ. ಇದರ ಸುತ್ತ ಗಿಡಗೆಂಟೆಗಳು ಬೆಳೆದು ನಿಂತಿವೆ ಎಂದು ಸ್ಥಳೀಯ ನಿವಾಸಿ ಅರುಣ್ ಕುಮಾರ್, ಆಕಾಶ್, ನಟೇಶ್, ಪ್ರಮೀಳಾ ಅವರು ಬೇಸರ ವ್ಯಕ್ತಪಡಿಸಿದರು.

ಪುರಸಭೆ ಅಧಿಕಾರಿಗಳು ತಕ್ಷಣ ಉದ್ಯಾನದ ಕಡೆ ಗಮನ ಹರಿಸಿ ಅಗತ್ಯ ಸೌಕರ್ಯ ಕಲ್ಪಿಸುವ ಜತೆಗೆ, ಕಾಲ ಕಾಲಕ್ಕೆ ಸೂಕ್ತ ನಿರ್ವಹಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಉದ್ಯಾನವನದಲ್ಲಿ ಕಾಣಿಸಿಕೊಂಡ ಹಾವು
ಉದ್ಯಾನವನದಲ್ಲಿ ಕಾಣಿಸಿಕೊಂಡ ಹಾವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT