ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೂಲಿಬೆಲೆ ಪಾದಚಾರಿ ಮಾರ್ಗ ಅತಿಕ್ರಮಣ

ರಸ್ತೆಯಲ್ಲಿಯೇ ಜನರ ಓಡಾಟ । ಸುಗಮ ಸಂಚಾರಕ್ಕೆ ಅಡ್ಡಿ
ಮಹಾಂತ ಕೆ.ಎಸ್
Published 8 ಜುಲೈ 2024, 4:18 IST
Last Updated 8 ಜುಲೈ 2024, 4:18 IST
ಅಕ್ಷರ ಗಾತ್ರ

ಸೂಲಿಬೆಲೆ: ಪಟ್ಟಣದಲ್ಲಿ ಬೀದಿ ವ್ಯಾಪಾರಿಗಳು ಪಾದಚಾರಿಯನ್ನು ಅಕ್ರಮಿಸಿಕೊಂಡಿರುವುದರಿಂದ ಫುಟ್‌ಪಾತ್‌ ಮಯವಾಗಿದ್ದು, ಜನ ಓಡಾಟಕ್ಕೆ ದಾರಿ ಹುಡಕಾಡುವ ಪರಿಸ್ಥಿತಿ ಎದುರಾಗಿದೆ.

ಹೋಬಳಿ ಕೇಂದ್ರ ಸೂಲಿಬೆಲೆ ವಾಣಿಜ್ಯ ಮತ್ತು ಜನ ಸಂಖ್ಯೆಯಲ್ಲಿ ಬೆಳೆಯುತ್ತಿದೆ. ಪಟ್ಟಣದಲ್ಲಿರುವ ಶಾಲಾ–ಕಾಲೇಜು ಓಡಾಡುವ ವಿದ್ಯಾರ್ಥಿಗಳು ಇದೇ ಮಾರ್ಗದಲ್ಲಿ ಸಂಚರಿಸಬೇಕು. ಸುತ್ತಮುತ್ತಲ್ಲಿನ ಹತ್ತಾರು ಗ್ರಾಮದ ರೈತರು, ಸಾರ್ವಜನಿಕರು ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ವಿಜಯಪುರ, ಹೊಸಕೋಟೆ ಮುಖ್ಯ ರಸ್ತೆಯ ಪಾದಚಾರಿ ಮಾರ್ಗ ಆತಿಕ್ರಮಣದಿಂದ ಜನರು ರಸ್ತೆಯಲ್ಲೇ ಓಡಾಡುವ ಪರಿಸ್ಥಿತಿ ಬಂದಿದೆ.

ಪ್ರಾಥಮಿಕ ಶಾಲಾ ಆವರಣ ಮುಂಭಾಗ ಇರುವ ಪಾದಚಾರಿ ಮಾರ್ಗದಲ್ಲಿ ಕಬಾಬ್, ಗೂಡಂ ಅಂಗಡಿಗಳು ಅನಧಿಕೃತವಾಗಿ ತೆರೆದುಕೊಂಡಿದೆ. ಇದರಿಂದ ಪಾದಚಾರಿಗಳು ಓಡಾಡುವುದು ಸಾವಾಲಾಗಿದೆ. ಅಲ್ಲದೆ ಅಂಗಡಿಗಳ ಹಿಂಬದಿಯ ಕಾಲುವೆಯಲ್ಲಿ ಕಸ ತುಂಬಿಕೊಂಡು, ಮಳೆ ನೀರು ಸರಾಗವಾಗಿ ಹರಿಯುತ್ತಿಲ್ಲ. ಮಳೆ ಬಂದರೆ ನೀರು ರಸ್ತೆಯಲ್ಲೇ ಹರಿಯುತ್ತದೆ. ಇಲ್ಲದಿದ್ದರೆ ಕೊಳಚೆ ನೀರು ಸಂಗ್ರಹವಾಗಿ ಗಬ್ಬು ನಾರುತ್ತದೆ.

ಹೊಸಕೋಟೆ ವಿಜಯಪುರ ಮಾರ್ಗದ ಎರಡು ಬದಿಗಳಲ್ಲಿ ಫುಟ್‌ಪಾತ್‌ ವರೆಗೂ ಹೋಟಲ್, ಬೇಕರಿ, ವಿವಿಧ ರೀತಿಯ ವಾಣಿಜ್ಯ ಅಂಗಡಿಗಳು  ಇರುವುದರಿಂದ ವಾಹನಗಳ ಸುಗಮ ಸಂಚಾರಕ್ಕೂ ಅಡ್ಡಿಯಾಗಿದೆ. ಅಂಗಡಿ ಮುಂದೆ ಸಾಲುಗಟ್ಟಲೇ ವಾಹನಗಳನ್ನು ನಿಲ್ಲಿಸುವುದರಿಂದ ವಿಜಯಪುರ, ಹೊಸಕೋಟೆ, ಜಂಗಮಕೋಟೆ, ದೇವನಹಳ್ಳಿ ಮಾರ್ಗದಲ್ಲಿ ಸದಾ ವಾಹನ ದಟ್ಟಣೆಯಿಂದ ಕೂಡಿರುತ್ತದೆ.

ಬೆಳಗ್ಗೆ, ಸಂಜೆ ಮತ್ತು ಶಾಲೆ ಆರಂಭ ಮತ್ತು ಬಿಡುವ ವೇಳೆ ಜನ ಸಾಮಾನ್ಯರು ಮತ್ತು ಶಾಲಾ ಮಕ್ಕಳು ಭಯದಲ್ಲೇ ಓಡಾಡಬೇಕಿದೆ. ಈ ಸಮಸ್ಯೆಗೆ ಮುಕ್ತಿ ಕೊಡಿ ಎಂದು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಎಲ್ಲೆಲ್ಲಿ ವಾಹನ ದಟ್ಟಣೆ

ಸೂಲಿಬೆಲೆ ಸರ್ಕಾರಿ ಕನ್ನಡ ಶಾಲೆ ಆವರಣದ ಮುಂಭಾಗ ಸರ್ಕಾರಿ  ಆಸ್ಪತ್ರೆ ಮಾರ್ಗ ಸಿದ್ದಣ್ಣ ಹಾಗೂ ಪ್ರಕಾಶ್ ಅಂಗಡಿಗಳ ಮುಂಭಾಗ ಮಯೂರ ಬೇಕರಿ ಜುವೆಲರ್ಸ್ ಅಂಗಡಿಗಳ ಮುಂಭಾಗ ಸಾಯಿ ರಂಗ ಆಸ್ಪತ್ರೆ ಹಾಸುಪಾಸಿನಲ್ಲಿ ಹೆಚ್ಚು ಸಂಚಾರ ದಟ್ಟಣೆ ಇರುತ್ತದೆ ಇಲ್ಲಿ ಪುಟ್ ಪಾದಚಾರಿ ಮಾರ್ಗವೇ ಇಲ್ಲ.ಮಹಿಳೆಯರುಮಕ್ಕಳುವಯಸ್ಸಾದವರು ರಸ್ತೆಯಲ್ಲಿ ನಡೆದು ಸಾಗಬೇಕು. ಇನ್ನೂ ಪಾದಚಾರಿ ಮಾರ್ಗವು ಇಲ್ಲವು ಇಲ್ಲ. ಇಲ್ಲಿ ಅಂಗಡಿಗಳಿಗೆ ಬರುವ ಜನರು ರಸ್ತೆಯಲ್ಲಿ ವಾಹ ನಿಲ್ಲಿಸುವುದರಿಂದ ಸಮಸ್ಯೆ ಹೆಚ್ಚಾಗುತ್ತಿದೆ.

ಸೂಲಿಬೆಲೆಯ ಜಂಗಮಕೋಟೆ ಮುಖ್ಯ ರಸ್ತೆಯಲ್ಲಿ ಪಾದಚಾರಿ ಮಾರ್ಗ ಇದ್ದರೂ ಇಲ್ಲದಂತಾಗಿದೆ. ಫುಟ್‌ಪಾತ್‌ನಲ್ಲಿ ಅಂಗಡಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಓಡಾಡುವುದು ಕಷ್ಟ ಆಗುತ್ತಿದೆ.
ಸುಷ್ಮಾ ರಾಜೇಶ್, ಗೃಹಿಣಿ
ಶಾಲೆ–ಕಾಲೇಜಿಗೆ ಹೋಗುವ ವೇಳೆ ವಾಹನಗಳ ಸಂಚಾರ ಹೆಚ್ಚಾಗಿರುತ್ತದೆ. ರಸ್ತೆಗೆ ಹೊಂದಿಕೊಂಡಂತೆ ತಳ್ಳೋ ಗಾಡಿ ಅಂಗಡಿಗಳು ಇರುತ್ತವೆ. ಇದರಿಂದ ರಸ್ತೆಯಲ್ಲೇ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕು.
ಎನ್‌. ರಕ್ಷಿತಾ ವಿದ್ಯಾರ್ಥಿನಿ
ಫುಟ್‌ಪಾತ್‌ ಅಕ್ರಮಿಸಿಕೊಂಡಿರುವ ಅನಧಿಕೃತ ಮಳಿಗೆಗಳನ್ನು ತೆರವುಗೊಳಿಸಿ ವಿದ್ಯಾರ್ಥಿಗಳು ಮತ್ತು ಜನರ ಸಂಚಾರಕ್ಕೆ ಅನುವು ಮಾಡಿಕೊಂಡಬೇಕು.
ಎಂ.ಆರ್.ಉಮೇಶ್, ಸ್ಥಳೀಯ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT