ಅಕ್ಷರಾಭ್ಯಾಸದ ಜೊತೆ ಉತ್ತಮ ಸಂಸ್ಕಾರ ಕಲಿಸಿ

ಗುರುವಾರ , ಜೂನ್ 27, 2019
23 °C

ಅಕ್ಷರಾಭ್ಯಾಸದ ಜೊತೆ ಉತ್ತಮ ಸಂಸ್ಕಾರ ಕಲಿಸಿ

Published:
Updated:
Prajavani

ವಿಜಯಪುರ: ಅಕ್ಷರಾಭ್ಯಾಸಕ್ಕೆ ಮುಂಚೆ ಮಕ್ಕಳಿಗೆ ಚಿತ್ರ ಪರಿಚಯವಾಗಬೇಕು ಎಂದು ಬಸವ ಕಲ್ಯಾಣಮಠದ ಅದ್ಯಕ್ಷ ಮಹದೇವ ಸ್ವಾಮೀಜಿ ಹೇಳಿದರು.

ಇಲ್ಲಿನ ಅಶೋಕನಗರದಲ್ಲಿರುವ ಜೇಸಿಸ್ ಶಾಲೆಯಲ್ಲಿ ಆಯೋಜಿಸಿದ್ದ ಅಕ್ಷರಾಭ್ಯಾಸ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

‘ಈಗಿನ ಸಮಾಜದಲ್ಲಿ ಮಕ್ಕಳು ವಿಷಯಗಳನ್ನು ಗ್ರಹಿಸುವ ಸಾಮರ್ಥ್ಯವನ್ನು ಹಿಂದಿನ ಕಾಲದ ಮಕ್ಕಳಿಗೆ ಹೋಲಿಸುವುದಕ್ಕೆ ಅಸಾಧ್ಯ. ಎರಡು ಅಥವಾ ಎರಡೂವರೆ ವರ್ಷ ತುಂಬಿದ ಮಕ್ಕಳು ಒಂದೊಂದು ವಸ್ತುಗಳ ವಿಷಯಗಳನ್ನು ತಿಳಿಯಬೇಕೆಂಬ ಕುತೂಹಲ ದಿನೇ ದಿನೇ ಹೆಚ್ಚಾಗುತ್ತದೆ. ಯಾವುದಕ್ಕೆ ಅಳಿವಿಲ್ಲವೋ ಅದು ಅಕ್ಷರ ಎಂದು ಅರ್ಥವಾಗುತ್ತದೆ. ಬರೆದ ಲಿಪಿಯಾದರೊ ಅಳಿಸಿ ಬಿಟ್ಟರೆ ನಾಶಹೊಂದುತ್ತದೆ. ಆಗ ಈ ಅಕ್ಷರ ಶಬ್ದ ಲಿಪಿಗೆ ಸರಿಯಾಗಿ ಹೊಂದುವುದಿಲ್ಲ. ಅಕ್ಷರಾಭ್ಯಾಸದೊಂದಿಗೆ ಅವರಿಗೆ ಸಂಸ್ಕಾರವನ್ನೂ ಕಲಿಸಬೇಕು’ ಎಂದರು.

ಜೇಸಿಸ್ ಸಂಸ್ಥೆಯ ಅಧ್ಯಕ್ಷ ಆರ್.ಸಿ.ಮಂಜುನಾಥ್ ಮಾತನಾಡಿ, ‘ವಿದ್ಯೆಯ ಆರಂಭವೇ ಒಂದು ಉತ್ತಮ ಸಂಸ್ಕಾರ. ಈ ಸಂಸ್ಕಾರವು ಬಹಳ ಪೂರ್ವದಿಂದಲೂ ಚೂಡಾಕರ್ಮದೊಡನೆಯೇ ಮಾಡುತ್ತಿದ್ದರು. ವಾಲ್ಮೀಕಿ ಮಹರ್ಷಿಗಳು ಲವ-ಕುಶರಿಗೆ ಚೂಡಾಕರ್ಮವಾದ ಮೇಲೆ ವಿದ್ಯಾರಂಭ ಮಾಡಿಸಿದರು. ಶಾಸ್ತ್ರದ ಪ್ರಕಾರ ಮಕ್ಕಳಿಗೆ ಐದನೇ ವರ್ಷ, ಐದನೇ ತಿಂಗಳ, ಐದನೇ ದಿನ ಅಕ್ಷರಾಭ್ಯಾಸ ಮಾಡಬೇಕು. ಈಗಿನ ಮಕ್ಕಳು ಈ ವೇಳೆಗಾಗಲೇ ಶಾಲೆಗೆ ಹೋಗುತ್ತಿರುತ್ತಾರೆ. ಆದ್ದರಿಂದ ಅವರ ಬೆಳವಣಿಗೆ ಮತ್ತು ಬುದ್ಧಿ ತಿಳಿಸುವ ಇದಕ್ಕೆ ಮುಂಚೆಯೇ ಅಕ್ಷರಾಭ್ಯಾಸ ಪ್ರಾರಂಭಿಸುವುದು ಉತ್ತಮವಾದ ಬೆಳವಣಿಗೆ. ಪೋಷಕರು ಮಕ್ಕಳ ಕುರಿತು ಹೆಚ್ಚು ಕಾಳಜಿ ವಹಿಸಬೇಕು ಎಂದರು.

ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು. ಆಡಳಿತಾಧಿಕಾರಿ ಮಮತಾ ಮಂಜುನಾಥ್, ನಿಕಟಪೂರ್ವ ಅಧ್ಯಕ್ಷ ಮುಕುಂದರಾವ್, ಇದ್ದರು.

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !