ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯುವಪೀಳಿಗೆಗೆ ತಾತಯ್ಯ ಚರಿತ್ರೆ ತಿಳಿಸಿ’

ಬಲಿಜ ಜನಾಂಗ ಸಂಘದ ಅಧ್ಯಕ್ಷ ರಾಮಾಂಜಿನೇಯ ದಾಸ್‌ ಸಲಹೆ
Last Updated 8 ಮಾರ್ಚ್ 2023, 6:02 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ(ದೇವನಹಳ್ಳಿ): ‘ಕೈವಾರ ತಾತಯ್ಯ ಅವರ ಚರಿತ್ರೆಯನ್ನು ಯುವಪೀಳಿಗೆಗೆ ತಿಳಿಯುವ ಅಗತ್ಯ ಇದೆ. ಅವರ ತತ್ವಾದರ್ಶಗಳು ಅತ್ಯಂತ ಮಹತ್ವವಾಗಿವೆ’ ಎಂದು ಬಲಿಜ ಜನಾಂಗ ಸಂಘದ ಅಧ್ಯಕ್ಷ ರಾಮಾಂಜಿನೇಯ ದಾಸ್‌ ಹೇಳಿದರು.

ತಾಲ್ಲೂಕಿನ ಬೂದಿಗೆರೆ ಗ್ರಾ.ಪಂ. ಆವರಣದಲ್ಲಿ ಮಂಗಳವಾರ ಬಲಿಜ ಸಂಘದಿಂದ ನಡೆದ ಶ್ರೀಯೋಗಿ ನಾರೇಯಣ ಯತೀಂದ್ರರ ಜಯಂತಿಯಲ್ಲಿ ಅವರು ಮಾತನಾಡಿದರು.

ಹಲವು ದಿನಗಳಿಂದ ಕೈವಾರ ತಾತಯ್ಯ ಅವರ ಜಯಂತಿ ಆಚರಣೆ ಮಾಡಲು ಕೈವಾರ ಯೋಗಿ ನಾರೇಯಣ ಯತೀಂದ್ರ ಮಠವು ವಿದ್ವಾಂಸರು, ಪಂಡಿತರು, ಜ್ಞಾನಿಗಳು, ಸಂಶೋಧಕರ ಸಮಿತಿಯೊಂದನ್ನು ರಚಿಸಿತ್ತು. ಆ ಸಮಿತಿ ಪ್ರತಿವರ್ಷ ಫಾಲ್ಗುಣ ಮಾಸದ ಹುಣ್ಣಿಮೆಯಂದು ಆಚರಿಸಲು ತೀರ್ಮಾನ ತೆಗೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಇಂದು ಕೈವಾರ ತಾತಯ್ಯ ಅವರ ಜಯಂತಿ ಆಚರಣೆ ಮಾಡಲಾಗುತ್ತಿದೆ ಎಂದರು.

ತಾಲ್ಲೂಕು ಬಲಿಜ ಸಂಘದ ಉಪಾಧ್ಯಕ್ಷ ಮೂರ್ತಿ ಮಾತನಾಡಿದರು.

ತಾಲ್ಲೂಕು ಬಲಿಜ ಸಂಘದ ನಿರ್ದೇಶಕ ಶ್ರೀಧರ್, ಬೂದಿಗೆರೆ ಬಲಿಜ ಸಂಘದ ಉಪಾಧ್ಯಕ್ಷ ಅಶ್ವಥ್, ಮುನಿರಾಜು, ಶ್ರೀನಿವಾಸ್, ಕಾರ್ಯದರ್ಶಿ ಜನಾರ್ದನ್, ಸಹ ಕಾರ್ಯದರ್ಶಿ ಹರೀಶ್, ಸಂಚಾಲಕ ಗಿರೀಶ್, ರಾಮಾಂಜಿನಯ್ಯ, ಖಜಾಂಚಿ ಕೇಶವ್, ಸದಸ್ಯರಾದ ಲಕ್ಷ್ಮೀನಾರಾಯಣ್, ಲೋಕೇಶ್‌, ನಾಗೇಶ್‌, ರಾಮಣ್ಣ, ಸುರೇಶ್, ತಾ.ಪಂ. ಮಾಜಿ ಸದಸ್ಯ ಲಕ್ಷ್ಮಣ್‌ಗೌಡ, ಗ್ರಾ.ಪಂ. ಮಾಜಿ ಅಧ್ಯಕ್ಷ ಶ್ರೀನಿವಾಸ್‌ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT