ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಂಕಟಗಿರಿಕೋಟೆ ಗ್ರಾ.ಪಂ: 3.45 ಕೋಟಿ ಬಜೆಟ್

Published 8 ಮಾರ್ಚ್ 2024, 15:26 IST
Last Updated 8 ಮಾರ್ಚ್ 2024, 15:26 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ಹೋಬಳಿಯ ವೆಂಕಟಗಿರಿಕೋಟೆ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ಅಧ್ಯಕ್ಷೆ ಆಶಾ ಅವರ ಅಧ್ಯಕ್ಷತೆಯಲ್ಲಿ 2024-25ನೇ ಸಾಲಿನ ಬಜೆಟ್ ಮಂಡನೆ ಸಭೆ ನಡೆಯಿತು.

ಸದಸ್ಯ ಆರ್.ಅಮರನಾಥ್ ಅವರು 3.45 ಕೋಟಿ ಗಾತ್ರದ ಬಜೆಟ್ ಮಂಡಿಸಿದರು.

ಗ್ರಾಮ ಪಂಚಾಯಿತಿ ನಿರೀಕ್ಷಿತ ಆದಾಯದಲ್ಲಿ ಶೇ 40 ರಷ್ಟು ಅನುದಾನವನ್ನು ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಇದರಲ್ಲಿ ಸಿಬ್ಬಂದಿಗಳ ವೇತನ, ವಿವಿಧ ಜಯಂತಿ, ಕಚೇರಿಯ ವೆಚ್ಚ ಒಳಗೊಂಡಿದೆ. 

ಶೇ 25 ರಷ್ಟು ಅನುದಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿ, ಶೇ 15 ರಷ್ಟು ಅನುದಾನವನ್ನು ವೈಯಕ್ತಿಕ ಬೇಡಿಕೆಗಳ ಪೂರೈಕೆಗೆ, ಜನಪ್ರಿಯ ಯೋಜನೆಗಳಿಗೆ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ.

ಶೇ 5ರ ಅಂಗವಿಕಲರ ಅನುದಾನದಲ್ಲಿ ಆರೋಗ್ಯರಕ್ಷಣೆ, ಸ್ವಯಂಉದ್ಯೋಗ, ಶಿಕ್ಷಣಕ್ಕೆ ಆಧ್ಯತೆ ನೀಡಲಾಗುತ್ತದೆ. ಶೇ 2ರ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಂಬಂಧಿತ ಅನುದಾನದಲ್ಲಿ ಯುವ ಸಬಲೀಕರಣಕ್ಕೆ ಆಧ್ಯತೆ ನೀಡಲಾಗಿದೆ. ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ವ್ಯಾಯಾಮ ಶಾಲೆ ನಿರ್ಮಿಸುವ ಗುರಿ ಹೊಂದಲಾಗಿದೆ.

ಪರಿಸರ ಉಳಿಸುವುದು, ಅಂತರ್ಜಲದ ಮಟ್ಟ ವೃದ್ಧಿಸುವುದು, ಗ್ರಾಮ ಪಂಚಾಯಿತಿ ಕಟ್ಟಡದ ಮೇಲೆ ಸೌರಫಲಕಗಳು ಅಳವಡಿಸಿ, ವಿದ್ಯುತ್ ಪಡೆಯುವುದು, ಗ್ರಾಮೀಣ ಭಾಗದ ಎಲ್ಲಾ ಸಾರ್ವಜನಿಕರಿಗೂ ಉಚಿತವಾಗಿ ಗಣಕಯಂತ್ರ ತರಬೇತಿ, ಸ್ತ್ರೀಶಕ್ತಿ ಸಂಘದ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಉದ್ಯಮಶೀಲತಾ ಚಟುವಟಿಕೆ ಹಮ್ಮಿಕೊಳ್ಳಲು ಅಗತ್ಯ ನೆರವು ನೀಡಲು ತೀರ್ಮಾನಿಸಲಾಗಿದೆ.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾ, ಉಪಾಧ್ಯಕ್ಷ ವಿಶ್ವನಾಥಾಚಾರ್, ಪಿಡಿಓ ಬಸವನಗೌಡ ಗಂಗಪ್ಪಳವರ, ಕಾರ್ಯದರ್ಶಿ ವಿ.ಪ್ರಜ್ವಲ್, ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT