ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ ಬ್ಯಾಂಕ್‌: ವಾರ್ಷಿಕ ₹ 113 ಕೋಟಿ ವಹಿವಾಟು

Last Updated 27 ಮೇ 2019, 13:10 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ವಾರ್ಷಿಕ ₹ 113 ಕೋಟಿಗಳಷ್ಟು ವಹಿವಾಟು ನಡೆಸುವ ಮೂಲಕ 1963 ರಿಂದಲೂ ದೊಡ್ಡಬಳ್ಳಾಪುರದಲ್ಲಿ ವಿಜಯ ಬ್ಯಾಂಕ್ ಕಾರ್ಯನಿರ್ವಹಿಸಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಬ್ಯಾಂಕ್‌ ಈಗ ಬ್ಯಾಂಕ್ ಆಫ್ ಬರೋಡದಲ್ಲಿ ವಿಲೀನವಾಗಿ 9,500 ಶಾಖೆಗಳನ್ನು ಹೊಂದುವ ಮೂಲಕ ದೇಶದ 2ನೇ ಅತಿ ದೊಡ್ಡ ಬ್ಯಾಂಕ್ ಎನಿಸಿಕೊಂಡಿದೆ ಎಂದು ಬ್ಯಾಂಕಿನ ವಲಯ ಮುಖ್ಯಸ್ಥ ಎಸ್.ಎ. ಸುದರ್ಶನ್ ಹೇಳಿದರು.

ನಗರದ ರೋಜಿಪುರದ ಒಕ್ಕಲಿಗರ ಸಮುದಾಯ ಭವನದ ಮುಂಭಾಗದಲ್ಲಿರುವ ಬಾಲಾಂಜನೇಯ ಕಾಂಪ್ಲೆಕ್ಸ್ ಕಟ್ಟಡಕ್ಕೆ ಸ್ಥಳಾಂತರಿಸಲಾಗಿರುವ ಬ್ಯಾಂಕ್ ಆಫ್ ಬರೋಡ (ವಿಜಯ ಬ್ಯಾಂಕ್)ನ ನೂತನ ಕಚೇರಿ ಉದ್ಘಾಟನೆಯಲ್ಲಿ ಮಾತನಾಡಿದರು.

ಸರ್ಕಾರದ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಗ್ರಾಹಕರ ಎಲ್ಲ ರೀತಿಯ ಬ್ಯಾಂಕಿಂಗ್ ಸೇವೆಗಳನ್ನು ನೀಡಲು ಕಟಿಬದ್ದವಾಗಿದೆ. ಬ್ಯಾಂಕ್ ಆಫ್ ಬರೋಡದಲ್ಲಿ ಪ್ರಸ್ತುತ 13 ಸಾವಿರ ಎಟಿಎಂ ಘಟಕಗಳಿವೆ. 85 ಸಾವಿರಕ್ಕೂ ಹೆಚ್ಚು ಮಂದಿ ಸಿಬ್ಬಂದಿಯಿದ್ದಾರೆ. ನಗರ, ಗ್ರಾಮಾಂತರ ಮಟ್ಟದಲ್ಲಿ ಹೆಚ್ಚಿನ ಬ್ಯಾಂಕಿಂಗ್ ಸೇವೆಗಳನ್ನು ನೀಡಲಾಗುತ್ತಿದೆ ಎಂದರು.

ಕ್ಷೇತ್ರೀಯ ಪ್ರಬಂಧಕ ರವಿ ಸುಬ್ರಮಣಿ ಮಾತನಾಡಿ, ಅರೆ ನಗರ ವ್ಯಾಪ್ತಿಯ ಬ್ಯಾಂಕ್‍ಗಳಲ್ಲಿ ಸರ್ಕಾರದ ಅನುದಾನದಲ್ಲಿ ಶೇ4 ಬಡ್ಡಿ ದರದಲ್ಲಿ ಚಿನ್ನದ ಮೇಲಿನ ಸಾಲವನ್ನು ನೀಡಲಾಗುತ್ತಿದೆ. ಜನಸಾಮಾನ್ಯರ ಕೈಗೆಟುಕುವಂತೆ ವಿವಿಧ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇಲ್ಲಿನ ಶಾಖೆ ವಾರ್ಷಿಕ ವಹಿವಾಟಿನ ಗುರಿಯನ್ನು ₹ 150 ಕೋಟಿಗೆ ಮುಟ್ಟಲು ಗ್ರಾಹಕರ ಸಹಕಾರ ಅಗತ್ಯವಾಗಿದೆ ಎಂದರು.

ವಿಜಯ ಬ್ಯಾಂಕ್‍ನಲ್ಲಿ ಹಣ ಕಟ್ಟಲು ಅತ್ಯಾಧುನಿಕ ಸೌಲಭ್ಯದ ಆಟೋಮೆಷಿನ್ ಅಳವಡಿಸಬೇಕಿದೆ. ಬ್ಯಾಂಕ್ ಪಾಸ್ ಪುಸ್ತಕ ಮುದ್ರಿಸಲು ಯಂತ್ರವನ್ನು ಅಳವಡಿಸಿಸುವುದರೊಂದಿಗೆ ಆಧುನಿಕ ಸೌಲಭ್ಯಗಳನ್ನು ನೀಡುವಂತೆ ಗ್ರಾಹಕರು ಮನವಿ ಮಾಡಿದರು.

ಹಿರಿಯ ವಕೀಲ ಎ.ಆರ್‌. ನಾಗರಾಜನ್‌, ಹಿರಿಯ ಕನ್ನಡಪರ ಹೋರಾಟಗಾರ ಟಿ.ಎನ್. ಪ್ರಭುದೇವ್, ಶಾಖಾ ಪ್ರಬಂಧಕ ಸನಾತನ ಕುಮಾರ್, ಬ್ಯಾಂಕ್ ಗ್ರಾಹಕರು ಹಾಗೂ ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT