ವಿಜಯಪುರ(ದೇವನಹಳ್ಳಿ): ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಭಾನುವಾರ ಎ.ಪಿ.ಜೆ.ಅಬ್ದುಲ್ ಕಲಾಂ ಕಪ್-2024 ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ನಡೆಯಿತು.
ಪೈನಲ್ ಪಂದ್ಯದಲ್ಲಿ ಯಂಗ್ ಸ್ಟಾರ್ಸ್ ತಂಡವನ್ನು ಮಣಿಸಿದ ಎರ್ಥುಲ್ ಸೂಪರ್ ಸ್ಟಾರ್ಸ್ ತಂಡವು ಚಾಂಪಿಯನ್ ಆಯಿತು. ವಿಜೇತ ತಂಡಕ್ಕೆ ₹50 ಸಾವಿರ ನಗದು ಆಕರ್ಷಕ ಟ್ರೋಫಿ, ಪರಾಜಿತ ತಂಡಕ್ಕೆ ₹30 ಸಾವಿರ ನಗದು ಮತ್ತು ಟ್ರೋಪಿ ವಿತರಿಸಲಾಯಿತು. ಒಟ್ಟು ಎಂಟು ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು.
ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಉಪಾಧ್ಯಕ್ಷ ವಲ್ಲಿಜಾನ್ ಅವರು ಟ್ರೋಫಿ ವಿತರಿಸಿದರು.