ಮಹಿಳೆಯರು ಆರೋಗ್ಯ ಕಾಳಜಿ ವಹಿಸಿ

7
ದೊಡ್ಡಬಳ್ಳಾಪುರದಲ್ಲಿ ಆರೋಗ್ಯ ಅರಿವು ಕಾರ್ಯಕ್ರಮ

ಮಹಿಳೆಯರು ಆರೋಗ್ಯ ಕಾಳಜಿ ವಹಿಸಿ

Published:
Updated:
Deccan Herald

ದೊಡ್ಡಬಳ್ಳಾಪುರ: ಮಹಿಳೆಯರು ತಮ್ಮ ಕುಟುಂಬ ನಿರ್ವಹಣೆ, ಮನೆಯವರ ಆರೋಗ್ಯಕ್ಕೆ ನೀಡುವಷ್ಟೇ ಕಾಳಜಿಯನ್ನು ಅವರ ಆರೋಗ್ಯದ ಕಡೆಗೂ ನೀಡಬೇಕು ಎಂದು ಸ್ತ್ರೀರೋಗ ತಜ್ಞೆ ಡಾ.ಇಂದಿರಾ ಪ್ರಸಾದ್ ಹೇಳಿದರು.

ಅವರು ನಗರದ ಮಹಿಳಾ ಸಮಾಜ ಹಾಗೂ ಬಿಎಸ್‌ಜಿಒಸಿ ಸಂಸ್ಥೆಯ ಸಹಯೋಗದಲ್ಲಿ ನಡೆದ ಮಹಿಳೆಯರ ಆರೋಗ್ಯ ಮತ್ತು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಿಳೆಯ ಮೇಲೆ ಇಡೀ ಕುಟುಂಬದ ಆರೋಗ್ಯದ ಜವಾಬ್ದಾರಿ ಇರುತ್ತದೆ. ಸಾಮಾನ್ಯ ಕಾಯಿಲೆಗಳು ಬಂದಾಗ ನಿರ್ಲಕ್ಷ್ಯ ಮಾಡದೆ ತಪಾಸಣೆಗಳನ್ನು ಮಾಡಿಸಿಕೊಳ್ಳಬೇಕು. ಮಹಿಳೆಯರು ಹೆಚ್ಚಾಗಿ ಗರ್ಭಕೋಶ, ಸ್ತನ ಕ್ಯಾನ್ಸರ್ ಹಾಗೂ ಜನನಾಂಗದ ಕಾಯಿಲೆಗಳಿಗೆ ಸಿಲುಕುವುದೇ ಹೆಚ್ಚು ಎಂದು ಎಚ್ಚರಿಸಿದರು.

ಈ ಕಾಯಿಲೆಗಳನ್ನು ಪ್ರಾಥಮಿಕ ಹಂತದಲ್ಲಿಯೇ ಪರೀಕ್ಷೆ ಮಾಡಿಸಿಕೊಂಡರೆ ಶೇ 90ರಷ್ಟು ಗುಣ ಪಡಿಸಲು ಅವಕಾಶಗಳಿವೆ. ಮಹಿಳೆಯರ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಮಹಿಳಾ ವೈದ್ಯರ ತಂಡ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದರು.

ಮಹಿಳಾ ಸಮಾಜದ ಅಧ್ಯಕ್ಷೆ ಕೆ.ಎಸ್.ಪ್ರಭಾ ಮಾತನಾಡಿ, ಮಹಿಳೆಯರು ಹಬ್ಬಗಳಿಗೆ ನೀಡುವಷ್ಟೇ ಮಹತ್ವವನ್ನು ಅವರ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ನೀಡಿದರೆ ಕುಟುಂಬವಷ್ಟೇ ಅಲ್ಲದೆ ಇಡೀ ಸಮಾಜ ನೆಮ್ಮದಿಯಿಂದ ಇರಲಿದೆ ಎಂದು ಅಭಿಪ್ರಾಯಪಟ್ಟರು.

ಮಹಿಳೆಯರ ಆರೋಗ್ಯದ ಬಗ್ಗೆ ಹೆಚ್ಚು ಕಾರ್ಯಕ್ರಮಗಳನ್ನು ಮಹಿಳಾ ಸಮಾಜ ರೂಪಿಸುತ್ತ ಬಂದಿದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಅರಿವು ಹಾಗೂ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸ್ತ್ರೀರೋಗ ತಜ್ಞರಾದ ಶ್ರಮದಾನ ಸಂಸ್ಥೆಯ ಡಾ.ಶೋಭಾ ಎನ್.ಗುಡಿ, ಗ್ರಿನ್ ಸಿಟಿ ಆಸ್ಪತ್ರೆಯ ಡಾ.ನಿರ್ಮಲ, ಕ್ಲೌಡ್ ನೈನ್ ಮತ್ತು ಮದರ್ ಹುಡ್ ಅಸ್ಪತ್ರೆಯ ಡಾ.ಅನುರಾಧ, ಸುಚಿತ್ರ, ರಾಧಿಕ ಶ್ರೀನಿವಾಸ್, ದಾಕ್ಷಾಯಿಣಿ ವಿಶ್ವನಾಥ್, ಮಹಿಳಾ ಸಮಾಜದ ಉಪಾಧ್ಯಕ್ಷೆ ಕವಿತಾ, ಕಾರ್ಯದರ್ಶಿ ಎಲ್.ಸಿ.ದೇವಕಿ, ಖಜಾಂಚಿ ಜಿ.ಎನ್.ಯಶೋಧ, ನಿರ್ದೇಶಕಿ ಎಂ.ಕೆ.ವತ್ಸಲಾ, ವಿ.ನಿರ್ಮಲ, ಎಸ್.ಗೌರಮ್ಮ, ಟಿ.ಪಿ.ವರಲಕ್ಷ್ಮೀ, ಗಿರಿಜಾ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !