ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾನಸಿಕ ಖಿನ್ನತೆ: ನೇಣುಬಿಗಿದುಕೊಂಡು ಯುವಕ ಆತ್ಮಹತ್ಯೆ

Published : 17 ಆಗಸ್ಟ್ 2023, 14:58 IST
Last Updated : 17 ಆಗಸ್ಟ್ 2023, 14:58 IST
ಫಾಲೋ ಮಾಡಿ
Comments

ವಿಜಯಪುರ(ದೇವನಹಳ್ಳಿ): ಮಂಡಿಬೆಲೆ ರಸ್ತೆಯಲ್ಲಿ ವಾಸವಾಗಿದ್ದ ಯುವಕ ಉಜ್ವಲ್ (18) ಗುರುವಾರ ಮನೆಯಲ್ಲಿ ಕಬ್ಬಿಣದ ಕೊಂಡಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬುಧವಾರ ಆಟವಾಡಲೂ ಹೊರಗೆ ಹೋಗಿದ್ದ ಉಜ್ವಲ್‌ ರಾತ್ರಿ 11ಕ್ಕೆ ಮನೆಗೆ ಬಂದಿದ್ದ. ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡು ಮಲಗಿದ್ದ.  ಬೆಳಿಗ್ಗೆ ಎದ್ದೇಳದ ಕಾರಣ ಪೋಷಕರು ಕಿಟಕಿಯಲ್ಲಿ ನೋಡಿದಾದ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

ಈ ಸಂಬಂಧ ವಿಜಯಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

‘ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣನಾಗಿದ್ದ ಯುವಕ, ಯಾರೊಂದಿಗೂ ಬೆರೆಯದೇ ಮನೆಯಲ್ಲಿ ಮೌನವಾಗಿರುತ್ತಿದ್ದ. ಪ್ರತಿ ಅಮಾವಾಸ್ಯೆಯಲ್ಲೂ ಮನೆಯಲ್ಲಿ ಜೋರಾಗಿ ಕಿರುಚಾಡುತ್ತಿದ್ದ ಹೀಗಾಗಿ ಆತನ ಪೋಷಕರು ದೇವಸ್ಥಾನಕ್ಕೆ ಕರೆದುಕೊಂಡು ಪೂಜೆ ಮಾಡುತ್ತಿಸುತ್ತಿದ್ದರು’.

‘ಅಮಾವಾಸ್ಯೆಯಾದ ಬುಧವಾರ ದೇವಾಲಯಕ್ಕೆ ಹೋಗಬೇಕು ಎಂದು ಹೇಳಿದ್ದರೂ ಕೇಳದೆ, ಹೊರಗೆ ಆಟವಾಡಲು ಹೋಗಿ ರಾತ್ರಿ ತಡವಾಗಿ ಬಂದಿದ್ದ. ಈ ಸಮಯದಲ್ಲಿ ಪೋಷಕರು ದೇವಸ್ಥಾನಕ್ಕೆ ಹೋಗೋಣ ಎಂದಾಗ, ನಾಳೆ ಹೋಗೋಣವೆಂದು ಹೇಳಿ, ಮಲಗಿದ್ದ. ಬೆಳಿಗ್ಗೆ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ತಾಯಿ ದೂರಿನಲ್ಲಿ ತಿಳಿಸಿದ್ದಾರೆ’ ಪೊಲೀಸ್‌ ಇನ್‌ಸ್ಪೆಕ್ಟರ್‌ ಪ್ರಶಾಂತ್ ಸುರೇಶ್ ನಾಯಕ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT