ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವದಳ ಟ್ರಸ್ಟ್: ನ.10ಕ್ಕೆ ಗುರುನಮನ, ವಿಶ್ವಧರ್ಮ ಪ್ರವಚನ

Last Updated 8 ನವೆಂಬರ್ 2019, 12:01 IST
ಅಕ್ಷರ ಗಾತ್ರ

ಶಿವಮೊಗ್ಗ: ರಾಷ್ಟ್ರೀಯ ಬಸವದಳ ಟ್ರಸ್ಟ್ಅಂಬೇಡ್ಕರ್ ಭವನದಲ್ಲಿನ.10ರಂದು ಬೆಳಿಗ್ಗೆ 11ಕ್ಕೆಮಾತೆ ಮಹಾದೇವಿ ಅವರಿಗೆಗುರುನಮನ, ನೇತ್ರದಾನ ಸಂಕಲ್ಪ ಅಭಿಯಾನ, ವಿಶ್ವಧರ್ಮ ಪ್ರವಚನ ಕಾರ್ಯಕ್ರಮ ಹಮ್ಮಿಕೊಂಡಿದೆ.

ಕೂಡಲ ಸಂಗಮ ಬಸವಧರ್ಮ ಪೀಠದ ಅಧ್ಯಕ್ಷೆ ಮಾತೆ ಗಂಗಾದೇವಿಸಾನಿಧ್ಯ ವಹಿಸಲಿದ್ದಾರೆ. ಡಾ.ರಾಜಣ್ಣ ವೈದ್ಯರು ಗುರುನಮನ ಉಪನ್ಯಾಸ ನೀಡುವರು. ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಕುವೆಂಪುವಿಶ್ವವಿದ್ಯಾಲಯದಕುಲಪತಿ ಡಾ.ಬಿ.ಪಿ.ವೀರಭದ್ರಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಉದ್ಯಮಿ ಹಾಲಪ್ಪ, ರಾಷ್ಟ್ರೀಯ ಬಸವದಳದ ಅಧ್ಯಕ್ಷ ರಾಮಪ್ಪ, ಬಾಣೂರು ಚನ್ನಪ್ಪ, ರತ್ನಮ್ಮ ಮಹಾಲಿಂಗಪ್ಪ ಸೇರಿದಂತೆ ಹಲವರು ಉಪಸ್ಥಿತರಿರುವರು. ಅಂದೇಶಂಕರ ಕಣ್ಣಿನ ಆಸ್ಪತ್ರೆ ಸಹಕಾರದಲ್ಲಿ ನೇತ್ರದಾನ ಅಭಿಯಾನಹಮ್ಮಿಕೊಳ್ಳಲಾಗಿದೆಎಂದು. ಟ್ರಸ್ಟ್ ಕಾರ್ಯದರ್ಶಿಯೋಗೀಶ್ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ನ.11 ಮತ್ತು 12ರಂದು ಸಂಜೆ 6ಕ್ಕೆಕಲ್ಲಹಳ್ಳಿಯ 2ನೇ ಹಂತದಲ್ಲಿರುವ ಬಸವ ಮಂಟಪದಲ್ಲಿ ವಿಶ್ವಧರ್ಮ ಪ್ರವಚನ ಕಾರ್ಯಕ್ರಮ, ಭಕ್ತಿ ಸಮರ್ಪಣೆನಡೆಯಲಿದೆ. ಬೆಕ್ಕಿನಕಲಠ ಡಾ.ಮಲ್ಲಿಕಾರ್ಜಿನಮುರುಘರಾಜೇಂದ್ರ ಸ್ವಾಮೀಜಿ, ಕೈಗಾರಿಕೋದ್ಯಮಿ ನಂಜುಂಡಶೆಟ್ಟಿ,ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತೇಶ್, ಪಾಲಿಕೆ ಸದಸ್ಯೆ ಅನಿತಾ ರವಿಶಂಕರ್ಭಾ ಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ಅಧ್ಯಕ್ಷ ರಾಮಪ್ಪ, ಬಾಣೂರು ಹಿರಣ್ಣಯ್ಯ, ಅನ್ನಪೂರ್ಣಮ್ಮ, ಶಾಂತಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT