ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥಣಿಯಲ್ಲಿ ನಂಬಿಕೆಗೆ ಮೋಸ: ಸತೀಶ ಜಾರಕಿಹೊಳಿ

Published 6 ಜೂನ್ 2024, 16:22 IST
Last Updated 6 ಜೂನ್ 2024, 16:22 IST
ಅಕ್ಷರ ಗಾತ್ರ

ಅಥಣಿ: ‘ಅಥಣಿ ಕ್ಷೇತ್ರದಲ್ಲಿ ನಮ್ಮ ನಂಬಿಕೆಗೆ ಮೋಸವಾಗಿದೆ.  ಮೂಲ‌ ಕಾಂಗ್ರೆಸ್ ಮತದಾರರು ಕೈ ಹಿಡಿದ ಪರಿಣಾಮ ನಮಗೆ ಜಯವಾಗಿದೆ’ ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ಪರೋಕ್ಷವಾಗಿ ಶಾಸಕ ಲಕ್ಷ್ಮಣ ಸವದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಗುರುವಾರ ಅಭಿನಂದನಾ ಸಮಾರಂಭದಲ್ಲಿ ಅವರು, ‘ಈ ಬಾರಿ ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಗಾಳಿ ಬೀಸಿತ್ತು. ಆದರೆ ಕೆಲ ಕ್ಷೇತ್ರಗಳಲ್ಲಿ ನಮ್ಮವರಿಂದ ಮೋಸವಾಗಿದೆ. ಕ್ಷೇತ್ರದ ಅನೇಕ ಕಡೆ ಗೆಲುವಿನ ಗುಲಾಲ್ ಹಾರಿದ್ದರೂ ಅಥಣಿಯಲ್ಲಿ ಇದು ಸಾಧ್ಯವಾಗಲಿಲ್ಲ’ ಎಂದರು.

‘ನಮ್ಮ ನಂಬಿಕೆಗೆ ಅಥಣಿಯಲ್ಲಿ ಮೋಸವಾಗಿದೆ. ಇಲ್ಲಿನ ನಾಯಕರು ಪ್ರಚಾರ ಕಾರ್ಯದಲ್ಲಿ ಉತ್ಸಾಹ ತೋರಿಸಲಿಲ್ಲ. ಕೊನೆ ಪಕ್ಷ ನಮಗೆ ತಿಳಿಸಿದ್ದರೆ ನಾವಾದರೂ ಕೆಲಸ ಮಾಡಿ ಹೆಚ್ಚಿನ ಮತ ಪಡೆಯಲು ಶ್ರಮವಹಿಸಿ ಕೆಲಸ ಮಾಡುತ್ತಿದ್ದೆವು’ ಎಂದು ಸವದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

‘ಕಾಗವಾಡದಲ್ಲಿ ಶಾಸಕ ರಾಜು ಕಾಗೆ ಮತದಾನ ಪೂರ್ವದಲ್ಲಿ ಕ್ಷೇತ್ರದ ಸ್ಥಿತಿಗತಿ ಕುರಿತು ತಿಳಿಸಿದ್ದರು. ಸ್ವಲ್ಪ ಕಷ್ಟ ಎದುರಾಗುತ್ತಿದ್ದಂತೆ ನಮಗೂ ಕ್ಷೇತ್ರವನ್ನು ನೋಡಿಕೊಳ್ಳಲು ತಿಳಿಸಿದ್ದರ ಪರಿಣಾಮ ನಾವು ಚುನಾವಣೆಯಲ್ಲಿ ಹೆಚ್ಚಿನ ಕಾರ್ಯ ಮಾಡಲು ಸಹಕಾರಿಯಾಯಿತು‘ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT