ಬೆಳಗಾವಿ: ‘ನನ್ನಿಂದ ರೈತರು, ಫಲಾನುಭವಿಗಳು ಮತ್ತುರಾಜ್ಯದ ಜನರ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ’ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಉಮೇಶ ಕತ್ತಿ ಹೇಳಿದರು.

‘ರಾಜೀನಾಮೆ ಕೇಳುವುದಕ್ಕೆ ಡಿ.ಕೆ. ಶಿವಕುಮಾರ್ ಯಾರು? ಅವರಿಗೆ ಏನು ಅಧಿಕಾರವಿದೆ? ಡಿ.ಕೆ. ಶಿವಕುಮಾರ್ ಅವರು ಶವಯಾತ್ರೆ ಮಾಡುವುದಿದ್ದರೆ ಕಾಂಗ್ರೆಸ್ ಶವಯಾತ್ರೆ ಮಾಡಲಿ. ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮನೆವರೆಗೆ ಯಾತ್ರೆ ನಡೆಸಲಿ. ಅವರ ಮನೆ ಮುಂದೆಯೇ ಹೂಳಲಿ’ ಎಂದರು.

‘ಕಾಂಗ್ರೆಸ್ನವರಿಗೆ ಮಾಡುವುದಕ್ಕೆ ಕೆಲಸವಿಲ್ಲ. ಇದೇ ಸಿದ್ದರಾಮಯ್ಯ 4 ಕೆ.ಜಿ. ಅಕ್ಕಿ ಕೊಟ್ಟಿದ್ದನ್ನೂ ನೋಡಿದ್ದೇವೆ. ನಮ್ಮ ಸರ್ಕಾರದಿಂದ ಆಹಾರ ಭದ್ರತೆ ಯೋಜನೆಯಲ್ಲಿ ಪೌಷ್ಟಿಕ ಆಹಾರ ಕೊಡುತ್ತಿದ್ದೇವೆ. ಇದರಿಂದ ಜನರು, ರೈತರು ಹಾಗೂ ಪಡಿತರ ಚೀಟಿದಾರರಿಗೆ ಅನುಕೂಲ ಆಗುತ್ತದೆ’ ಎಂದರು. ‘ನನ್ನ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.