ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಲಕ್ಷ್ಯ ಸೇನ್‌ ಸಾರಥ್ಯ

ಏಷ್ಯಾ ಜೂನಿಯರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌
Last Updated 31 ಮೇ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಪ್ರತಿಭಾನ್ವಿತ ಸ್ಪರ್ಧಿಗಳಾದ ಲಕ್ಷ್ಯ ಸೇನ್‌ ಮತ್ತು ವೈಷ್ಣವಿ ಜಕ್ಕಾ ರೆಡ್ಡಿ ಅವರು ಏಷ್ಯಾ ಜೂನಿಯರ್ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ತಂಡಗಳನ್ನು ಮುನ್ನಡೆಸಲಿದ್ದಾರೆ.

ಜುಲೈ 14ರಿಂದ 22ರವರೆಗೆ ಇಂಡೊನೇಷ್ಯಾದ ಜಕಾರ್ತದಲ್ಲಿ ಚಾಂಪಿಯನ್‌ಷಿಪ್‌ ನಡೆಯಲಿದೆ. ಸಿಂಗಲ್ಸ್‌ ಮತ್ತು ಮಿಶ್ರ ತಂಡ ವಿಭಾಗಗಳಲ್ಲಿ ಸ್ಪರ್ಧೆಗಳು ಆಯೋಜನೆಯಾಗಿವೆ.

ಮಿಶ್ರ ತಂಡ ವಿಭಾಗದ ಸ್ಪರ್ಧೆಗಳು ಜುಲೈ 14ರಿಂದ 17 ರವರೆಗೆ ಜರುಗಲಿದ್ದು, ಜುಲೈ 18ರಿಂದ ಸಿಂಗಲ್ಸ್‌ ಸ್ಪರ್ಧೆಗಳು ನಡೆಯಲಿವೆ.

ಲಕ್ಷ್ಯ ಸೇನ್‌, ಪ್ರಿಯಾನ್ಸು ರಾಜಾವತ್‌,  ಅಮರ್‌ ಫಾರೋಗ್‌ ಮತ್ತು ಕಿರಣ್‌ ಜಾರ್ಜ್‌ ಅವರು ಬಾಲಕರ ಸಿಂಗಲ್ಸ್‌ನಲ್ಲಿ ಭಾರತದ ಸವಾಲು ಎತ್ತಿಹಿಡಿಯಲಿದ್ದಾರೆ.

ವೈಷ್ಣವಿ, ಆಕರ್ಷಿ ಕಶ್ಯಪ್‌ ಮತ್ತು ಎಸ್‌.ಕವಿ ಪ್ರಿಯ ಅವರು ಬಾಲಕಿಯರ ಸಿಂಗಲ್ಸ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.

ಮಂಜಿತ್‌ ಸಿಂಗ್‌ ಖ್ವಾಯಿರಾಕ್‌ ಪಮ್‌, ಡಿಂಕು ಸಿಂಗ್‌, ವಿಷ್ಣುವರ್ಧನ್‌ ಗೌಡ ಮತ್ತು ಶ್ರೀಕೃಷ್ಣ ಸಾಯಿ ಕುಮಾರ್‌ ಪೋಡಿಲ್‌ ಅವರು ಡಬಲ್ಸ್‌ ವಿಭಾಗದಲ್ಲಿ ಆಡಲಿದ್ದಾರೆ.

ಸಿಮ್ರನ್‌ ಸಿಂಘಿ, ರಿತಿಕಾ ಥಾಕರ್‌, ಕೆ.ಪ್ರೀತಿ ಮತ್ತು ಸೃಷ್ಟಿ ಜುಪ್ಪುಡಿ ಅವರು ಬಾಲಕಿಯರ ಡಬಲ್ಸ್‌ನಲ್ಲಿ ಪೈಪೋಟಿ ನಡೆಸಲಿದ್ದಾರೆ.

ಇತ್ತೀಚೆಗೆ ನಡೆದಿದ್ದ 19 ವರ್ಷದೊಳಗಿನವರ ಆಯ್ಕೆ ಟ್ರಯಲ್ಸ್‌ನಲ್ಲಿ ತೋರಿದ ಸಾಮರ್ಥ್ಯದ ಆಧಾರದಲ್ಲಿ ಇವರನ್ನು ಆಯ್ಕೆ ಮಾಡಲಾಗಿದೆ.

ಎಡ್ವಿನ್‌ ಜಾಯ್‌, ಓರಿಜಿತ್‌ ಚಾಲಿಹಾ, ಬಿ.ಸಾಯಿ ರೋಹಿತ್‌, ಆಕಾಶ್‌ ಚಂದ್ರನ್‌, ನಫೀಸಾ ಸಾರಾ ಸಿರಾಜ್‌, ಮೇಧಾ ಶಶಿಧರನ್‌ ಮತ್ತು ದೀಪ್ತಿ ಕುಯಿತಿ ಅವರೂ ತಂಡದಲ್ಲಿದ್ದಾರೆ.

ಚಾಂಪಿಯನ್‌ಷಿಪ್‌ಗೆ ಆಯ್ಕೆಯಾಗಿರುವ ಕ್ರೀಡಾಪಟುಗಳು ಜೂನ್‌ 25ರಿಂದ ಜುಲೈ 11ರವರೆಗೆ ಬೆಂಗಳೂರಿನಲ್ಲಿ ನಡೆಯುವ ಪೂರ್ವಸಿದ್ಧತಾ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಇವರಿಗೆ ರಾಷ್ಟ್ರೀಯ ಜೂನಿಯರ್‌ ತಂಡದ ಕೋಚ್‌ ಸಂಜಯ್‌ ಮಿಶ್ರಾ ಮಾರ್ಗದರ್ಶನ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT