ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಯ್ನಾ ಜಲಾಶಯಕ್ಕೆ ಹರಿದು ಬಂದ 2 ಟಿಎಂಸಿ ಅಡಿ ನೀರು

Published 3 ಜುಲೈ 2024, 14:08 IST
Last Updated 3 ಜುಲೈ 2024, 14:08 IST
ಅಕ್ಷರ ಗಾತ್ರ

ಚಿಕ್ಕೋಡಿ: ನೆರೆಯ ಮಹಾರಾಷ್ಟ್ರ ರಾಜ್ಯದ ಕೃಷ್ಣಾ ಹಾಗೂ ಉಪನದಿಗಳ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಬೀಳುತ್ತಿದ್ದರಿಂದ ಮಹಾರಾಷ್ಟ್ರ ರಾಜ್ಯದ ಸಾತಾರಾ ಜಿಲ್ಲೆಯ ಕೊಯ್ನಾ ಡ್ಯಾಂ ಗೆ 24 ಗಂಟೆಗಳ ಅವಧಿಯಲ್ಲಿ 2 ಟಿಎಂಸಿ ಅಡಿಗಳಷ್ಟು ನೀರು ಹರಿದು ಬಂದಿದ್ದು, 105 ಟಿಎಂಸಿ ಅಡಿ ಸಾಮರ್ಥ್ಯದ ಈ ಡ್ಯಾಂನಲ್ಲಿ ಬುಧವಾರ 23 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹವಾಗಿದೆ.

ಕಳೆದ 24 ಗಂಟೆಗಳಲ್ಲಿ ಕೊಯ್ನಾ ಆಣೆಕಟ್ಟು ಪ್ರದೇಶದಲ್ಲಿ 13.3 ಸೆ.ಮೀ, ಕೃಷ್ಣಾ ನದಿ ಉಗಮ ಸ್ಥಳವಾಗಿರುವ ಮಹಾಬಳೇಶ್ವರದಲ್ಲಿ 10.2 ಸೆ.ಮೀ ಮಳೆಯಾಗಿದೆ. ಹೀಗಾಗಿ ಕೊಯ್ನಾ ಆಣೆಕಟ್ಟೆಗೆ 21 ಸಾವಿರ ಕ್ಯುಸೆಕ್ ನೀರು ಒಳ ಹರಿವು ಇದ್ದು,. ಸಾತಾರಾ ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನಾ ಇಲಾಖೆ ಯಲ್ಲೋ ಅಲರ್ಟ್ ಘೋಷಿಸಿದೆ.

ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದ ವಾರಣಾದಲ್ಲಿ 10.5 ಸೆ.ಮೀ, ಕಾಳಮ್ಮವಾಡಿಯಲ್ಲಿ 12.9 ಸೆ.ಮೀ, ನವಜಾದಲ್ಲಿ 10.2 ಸೆ.ಮೀ, ರಾಧಾನಗರಿಯಲ್ಲಿ 85 ಸೆ.ಮೀ ಮಳೆಯಾಗಿದ್ದು, ಸಾಂಗ್ಲಿಯಲ್ಲಿ 0.9 ಸೆ.ಮೀ ಹಾಗೂ ಕೊಲ್ಹಾಪುರದಲ್ಲಿ 1.5 ಸೆ.ಮೀ ಮಳೆ ಬುಧವಾರ ದಾಖಲಾಗಿದೆ.

ಮಹಾ ಮಳೆಯಿಂದಾಗಿ ಕೊಲ್ಹಾಪುರ ಜಿಲ್ಲೆಯ ಕೃಷ್ಣಾ ನದಿಗೆ ಅಡ್ಡಲಾಗಿರುವ ರಾಜಾಪೂರೆ ಬ್ಯಾರೇಜಿನಲ್ಲಿ 20ಸಾವಿರ ಕ್ಯುಸೆಕ್ ಹೊರ ಹರಿವು ಇದ್ದು, ಕಲ್ಲೋಳ ಬಳಿಯಲ್ಲಿ ಧೂದಗಂಗಾ ನದಿಯಲ್ಲಿ 6,680 ಕ್ಯುಸೆಕ್ ನೀರು ಸೇರಿದಂತೆ ಕೃಷ್ಣಾ ಹಾಗೂ ದೂಧಗಂಗಾ ಸಂಗಮ ಸ್ಥಳವಾಗಿರುವ ಕಲ್ಲೋಳ ಬ್ಯಾರೇಜ್ ಬಳಿಯಲ್ಲಿ 26,680 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಕೃಷ್ಣಾ ಅಷ್ಟೇ ಅಲ್ಲದೇ ದೂಧಗಂಗಾ ಹಾಗೂ ವೇದಗಂಗಾ ನದಿಗಳ ನೀರು ಹರಿಯುವಿಕೆ ಪ್ರಮಾಣದಲ್ಲಿ ಬುಧವಾರ ಮತ್ತಷ್ಟು ಹೆಚ್ಚಳವಾಗಿದೆ.

6 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಕೃಷ್ಣಾ ನದಿಗೆ ಅಡ್ಡಲಾಗಿರುವ ಹಿಪ್ಪರಗಿ ಬ್ಯಾರೇಜಿನಲ್ಲಿ 3.90 ಟಿಎಂಸಿ ನೀರು ಸಂಗ್ರಹವಾಗಿದ್ದು, ಇಲ್ಲಿ 23,360 ಕ್ಯುಸೆಕ್ ಒಳ ಹರಿವು, 750 ಕ್ಯುಸೆಕ್ ಹೊರ ಹರಿವು ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT