ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ನರಿ ಕಡಿತಕ್ಕೆ 22 ದನಗಳು ಸಾವು

Last Updated 5 ಜನವರಿ 2022, 3:27 IST
ಅಕ್ಷರ ಗಾತ್ರ

ಮೂಡಲಗಿ: ತಾಲ್ಲೂಕಿನ ವೆಂಕಟಾಪುರ ಗ್ರಾಮದಲ್ಲಿ ಹುಚ್ಚ ನರಿಯು ತೋಟದಲ್ಲಿರುವ ದನಗಳಿಗೆ ಕಚ್ಚಿದ್ದರಿಂದ 22ಕ್ಕೂ ಅಧಿಕ ದನಗಳು ಸಾವನಪ್ಪಿದ ಘಟನೆಯು ತಾಲ್ಲೂಕಿನ ವೆಂಕಟಾಪುರ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಡಿ.26ರಿಂದ ಗ್ರಾಮದಲ್ಲಿ ಕೆಲವು ಎಮ್ಮೆ, ಆಕಳು ಕರುಗಳು ಹಠಾತವಾಗಿ ಸರಣಿಯಾಗಿ ಸಾವನಪ್ಪುತ್ತಿರುವುದಕ್ಕೆ ರೈತರು ಆತಂಕೊಂಡು ಡಿ. 31ರಂದು ಪಶು ಇಲಾಖೆಯ ಗಮನಕ್ಕೆ ತಂದಿದ್ದು, ಬೆಳಗಾವಿ ಪಶುಪಾಲನೆ ಇಲಾಖೆಯ ಉಪನಿರ್ದೇಶಕ ಡಾ.ಎ.ಕೆ.ಚಂದ್ರಶೇಖರ ಅವರು ಖುದ್ದಾಗಿ ಗ್ರಾಮಕ್ಕೆ ಭೇಟಿ ನೀಡಿ ವೈದ್ಯರ ತಂಡವನ್ನು ಕರೆಸಿ ಎಲ್ಲ ದನಗಳಿಗೆ ರೆಬಿಸ್ ಚುಚ್ಚುಮದ್ದು ಕೊಡಿಸಿ ವೆಂಕಟಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಹ ನಿಗಾವಹಿಸಿದ್ದಾರೆ.

ಸದ್ಯ ದನಕರುಗಳ ಸಾವು ನಿಯಂತ್ರಣಕ್ಕೆ ಬಂದಿದ್ದು, ಮೃತಪಟ್ಟಿರುವ ದನಗಳ ಮೆದುಳಿನ ಭಾಗವನ್ನು ಬೆಂಗಳೂರು ಮತ್ತು ಊಟಿಯಲ್ಲಿರುವ ರೆಬಿಸ್ ಕೇಂದ್ರಗಳಿಗೆ ಕಳುಹಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪಶು ಇಲಾಖೆಯ ಗೋಕಾಕ ಸಹ ನಿರ್ದೇಶಕ ಡಾ. ಎಂ.ವಿ. ಕಮತ, ಡಾ. ಎಂ.ಬಿ. ವಿಭೂತಿ, ಡಾ. ಬಿ.ಎಸ್. ಗೌಡರ, ಡಾ. ಪ್ರಶಾಂತ ಕುರಬೇಟ, ಎಂ.ಬಿ. ಹೊಸೂರ, ಸುರೇಶ ಆದಪ್ಪಗೋಳ ಮತ್ತು ಎಸ್.ಜಿ. ಮಿಲ್ಲಾನಟ್ಟಿ ಲಸಿಕೆ ನೀಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT