ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌ ಲೈವ್‌ನಲ್ಲಿ ವಿಷ ಸೇವಿಸಿದ ರೈತ!

Last Updated 28 ಆಗಸ್ಟ್ 2021, 13:16 IST
ಅಕ್ಷರ ಗಾತ್ರ

ಗೋಕಾಕ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಮಕ್ಕಳಗೇರಿ ಗ್ರಾಮದ ರೈತ ಲಕ್ಷ್ಮಣ ಬೀರಪ್ಪ ಈಳಿಗೇರ (34) ಎನ್ನುವವರು ಸಾಲಗಾರರ ಕಾಟ ತಾಳಲಾರದೆ ಫೇಸ್‌ಬುಕ್‌ ಲೈವ್‌ ಮಾಡುತ್ತಲೇ ಮನೆಯಲ್ಲಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶುಕ್ರವಾರ ನಡೆದಿದೆ. ಶನಿವಾರ ಗೊತ್ತಾಗಿದೆ.

ಕುಟುಂಬದವರು ಅವರನ್ನು ಗೋಕಾಕ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರು ಮಾಡಿದ್ದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

‘₹ 1.25 ಲಕ್ಷ ಸಾಲ ಕಟ್ಟಿದ್ದೆ. ₹ 3.5 ಲಕ್ಷ ಸಾಲವನ್ನು ಬಡ್ಡಿ ಸಮೇತ ಮಾರುಪಾವತಿಸಲು ಆಗಿರಲಿಲ್ಲ. ಹೀಗಾಗಿ, ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಿದ್ದಾರೆ. ಇದಕ್ಕೆ ಅರುಣ ಪವಾರ, ಅಶೋಕ ಅಂಕಲಗಿ ಮತ್ತು ಯಲ್ಲಪ್ಪ ಗಸ್ತಿ ಎನ್ನುವವರು ಕಾರಣ ಎಂದು ಆರೋಪಿಸಿದ್ದಾರೆ. ನನಗೆ ಕಿರುಕುಳ ನೀಡಿದ್ದಾರೆ ಎಂದು ದೂರಿದ್ದಾರೆ.

‘ಸಂಪೂರ್ಣ ಸಾಲ ಪಾವತಿಸದಿದ್ದರೆ ಪತ್ನಿ ಹಾಗೂ ಮಕ್ಕಳ ಜೀವಕ್ಕೆ ಅಪಾಯವಿದೆ ಎಂದು ಬೆದರಿಕೆ ಹಾಕಿದ್ದಾರೆ. ಕಾಟ ಕೊಡುತ್ತಿದ್ದಾರೆ’ ಎಂದು ದೂರಿದ್ದಾರೆ.

ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT