ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಲಹೊಂಗಲ: ನಿವೃತ್ತ ಯೋಧನಿಗೆ ಅದ್ಧೂರಿ ಸ್ವಾಗತ

Published 4 ಜೂನ್ 2023, 11:16 IST
Last Updated 4 ಜೂನ್ 2023, 11:16 IST
ಅಕ್ಷರ ಗಾತ್ರ

ಬೈಲಹೊಂಗಲ: ಭಾರತೀಯ ಸೇನೆಯಲ್ಲಿ 17 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಸೇವಾ ನಿವೃತ್ತಿಗೊಂಡು ವಾಪಸ್ಸಾದ ಯೋಧ ಶಿವಾನಂದ ಸಂಪಗಾವ ಅವರಿಗೆ ಮಾಜಿ ಸೈನಿಕರು, ಗೆಳೆಯರು ಹಾಗೂ ಕುಟುಂಬ ಸದಸ್ಯರು ಭಾನುವಾರ ಅದ್ಧೂರಿ ಸ್ವಾಗತ ಕೋರಿದರು.

ಭಾರತೀಯ ಸೇನೆಯ ಓಡಿಸಾ ಎಡಿ ಸೆಂಟರ್‌ನಿಂದ ಸೇವಾ ನಿವೃತ್ತಿ ಪಡೆದು ಪಟ್ಟಣಕ್ಕೆ ಆಗಮಿಸಿದ ಯೋಧ ಶಿವಾನಂದ, ಪತ್ನಿ ಮಮತಾ ಅವರನ್ನು ತಂದೆ, ತಾಯಿ, ಕುಟುಂಬಸ್ಥರು ಆರತಿ ಬೆಳಗಿ ಬರ ಮಾಡಿಕೊಂಡರು.

ಚೆನ್ನಮ್ಮನ ಅಶ್ವಾರೂಢ ಕಂಚಿನ ಪ್ರತಿಮೆಗೆ ಯೋಧ ಭವ್ಯ ಹೂವಿನ ಮಾಲೆ ಅರ್ಪಿಸಿ ಗೌರವ ಸಲ್ಲಿಸಿದರು. ನಂತರ ತಂದೆ, ತಾಯಿಗೆ ಸೇನೆಯ ಸೆಲ್ಯೂಟ್ ಮಾಡಿದರು. ತೆರೆದ ವಾಹನದಲ್ಲಿ ಎಪಿಎಂಸಿ ಗಣೇಶ ದೇವಸ್ಥಾನ, ಇಂಚಲ ಕ್ರಾಸ್, ರಾಯಣ್ಣ ವೃತ್ತ, ಮುರಗೋಡ ರಸ್ತೆ ಮಾರ್ಗವಾಗಿ ಸಮಾರಂಭದ ವೇದಿಕೆಯವರೆಗೆ ಮಾಜಿ ಸೈನಿಕರು, ಗೆಳೆಯರು ಯೋಧನ ರೋಡ್ ಶೋ ನಡೆಸಿದರು. ರಸ್ತೆಯುದ್ದಕ್ಕೂ ಭಾರತ ಮಾತಾಕೀ, ಭಾರತೀಯ ಸೈನಿಕರಿಗೆ ಜೈ ಘೋಷಣೆ ಕೂಗಿದರು. ರಾಯಣ್ಣ ವೃತ್ತದಲ್ಲಿ ರಾಯಣ್ಣನ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.

ಗಣಾಚಾರಿ ಕಲ್ಯಾಣ ಮಂಟಪದಲ್ಲಿ ನಡೆದ ಸ್ವಾಗತ ಸಮಾರಂಭದಲ್ಲಿ ದೇವಿ ಆರಾಧಕ ಡಾ.ಮಹಾಂತಯ್ಯಶಾಸ್ತ್ರೀ ಆರಾದ್ರಿಮಠ ಸಾನ್ನಿಧ್ಯವಹಿಸಿ ಮಾತನಾಡಿದರು.

ಮಾಜಿ ಸೈನಿಕ ಗಂಗಪ್ಪ ಗುಗ್ಗರಿ, ಹಿರಿಯರಾದ ಬಿ.ಬಿ.ಗಣಾಚಾರಿ, ಮಾಜಿ ಸೈನಿಕರಾದ ನಾಗಪ್ಪ ಗುಂಡ್ಲೂರ, ಉಳವಪ್ಪ ದೇಗಾಂವಿ, ನಿವೃತ್ತ ಎಎಸ್ಐ ಕಲ್ಲಣಗೌಡ ಕಲ್ಲಪ್ಪಗೌಡರ, ಸಾರಿಗೆ ಇಲಾಖೆ ನಿವೃತ್ತ ನಿರ್ವಾಹಕ ಸುಭಾಸ ಸಂಪಗಾಂವ, ಶಾಂತವ್ವ ಸಂಪಗಾಂವ, ಕೆಎಎಸ್ ಡಿಸಿಸಿಟಿ ಬಾಳೇಶ ಸಂಪಗಾಂವ, ಎಸ್.ಬಿ.ಮ್ಯಾನೇಜರ ವರ್ತೆಪ್ಪ ಸಂಪಗಾಂವ ಇದ್ದರು.

ರಾಯಣ್ಣ ಸ್ಮರಣೋತ್ಸವ ಸಮಿತಿ ಉಪಾಧ್ಯಕ್ಷ ಸೋಮನಾಥ ಸೊಪ್ಪಿಮಠ, ವಿರುಪಾಕ್ಷ ಗಣಾಚಾರಿ, ನಿವೃತ್ತ ಯೋಧರಾದ ಬಸವರಾಜ ಸರಾಯದ, ಆನಂದ ತೋಟಗಿ, ಈರಪ್ಪ ಕಾಡೇಶನವರ, ಚಂದ್ರು ಮಾಳಿ, ಸಂತೋಷ ಹುಣಶೀಕಟ್ಟಿ, ಮಂಜುನಾಥ ಜ್ಯೋತಿ, ಬಸವರಾಜ ತಿಗಡಿ, ಈರಣ್ಣಾ ಮೇಳಿಕಟ್ಟಿ, ಆನಂದ ಹಿರೇಮಠ, ಮಂಜುನಾಥ ಕರಿಗಾರ, ಚಂದ್ರು ಉಂಡಿ, ಕುಟುಂಬ ಸದಸ್ಯರು, ಗೆಳೆಯರು ಇದ್ದರು.

ಬೈಲಹೊಂಗಲ ಚನ್ನಮ್ಮನ ವೃತ್ತದಲ್ಲಿ ಸೇವಾ ನಿವೃತ್ತಿ ಹೊಂದಿ ಬಂದ ಯೋಧ ಶಿವಾನಂದ ಸಂಪಗಾಂವ ಅವರನ್ನು ಮಾಜಿ ಸೈನಿಕರು ಗೆಳೆಯರು ಕುಟುಂಬಸ್ಥರು ಭಾನುವಾರ ಅದ್ಧೂರಿ ಸ್ವಾಗತ ಕೋರಿದರು.
ಬೈಲಹೊಂಗಲ ಚನ್ನಮ್ಮನ ವೃತ್ತದಲ್ಲಿ ಸೇವಾ ನಿವೃತ್ತಿ ಹೊಂದಿ ಬಂದ ಯೋಧ ಶಿವಾನಂದ ಸಂಪಗಾಂವ ಅವರನ್ನು ಮಾಜಿ ಸೈನಿಕರು ಗೆಳೆಯರು ಕುಟುಂಬಸ್ಥರು ಭಾನುವಾರ ಅದ್ಧೂರಿ ಸ್ವಾಗತ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT