ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗಡಿ ಸೂಚನೆ: ತಿಲಕವಾಡಿ ರೈಲ್ವೆ ಗೇಟ್ ವಿಸ್ತರಣೆ

Last Updated 21 ಜುಲೈ 2019, 15:45 IST
ಅಕ್ಷರ ಗಾತ್ರ

ಬೆಳಗಾವಿ: ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಸೂಚನೆ ಮೇರೆಗೆ ಇಲ್ಲಿನ ತಿಲಕವಾಡಿಯ ರೈಲ್ವೆ ಗೇಟ್ (ಗೇಟ್‌ ನಂ.4) ವಿಸ್ತರಣೆ ಮಾಡಲಾಗಿದೆ.

ಅತ್ಯಂತ ಹೆಚ್ಚಿನ ವಾಹನ ಸಂದಣಿಯ ಗೇಟ್ ಇದಾಗಿದ್ದು, ಕಿರಿದಾಗಿದ್ದರಿಂದಾಗಿ ತೀವ್ರ ತೊಂದರೆಯಾಗಿತ್ತು. ರಸ್ತೆಯ ಅಗಲವನ್ನು 4.8 ಮೀಟರ್‌ನಿಂದ 10.2 ಮೀಟರ್‌ಗೆ ವಿಸ್ತರಿಸಲಾಗಿದೆ. ಹಾಗೂ 7.5 ಮೀ. ಎತ್ತರವಿದ್ದ ಗೇಟ್ (ಗೇಟ್ ಬೂಮ್ ಬ್ಯಾರಿಯರ್‌) ಅನ್ನು 12 ಮೀಟರ್‌ಗೆ ಎತ್ತರಿಸಲಾಗಿದೆ. ಇದರೊಂದಿಗೆ ಖಾನಾಪುರ ಹಾಗೂ ಪಣಜಿಗೆ ಸಂಪರ್ಕಿಸುವ ಈ ಗೇಟ್‌ನಲ್ಲಿ ಇದ್ದ ತೊಡಕುಗಳನ್ನು ನಿವಾರಿಸಿದಂತಾಗಿದೆ.

ಸುರಕ್ಷತೆ ದೃಷ್ಟಿಯಿಂದಾಗಿ, ಈ ರಸ್ತೆಯ ಎರಡೂ ತುದಿಗಳಲ್ಲೂ ಸ್ಪೀಡ್ ಬ್ರೇಕರ್‌ಗಳನ್ನು ಹಾಕಲಾಗಿದೆ. ರಸ್ತೆಯ ಅಗಲಕ್ಕೆ ತಕ್ಕಂತೆ ಸಿಗ್ನಲ್ ದೀಪದ ಕಂಬವನ್ನೂ ಸ್ಥಳಾಂತರಿಸಲಾಗಿದೆ. ರಸ್ತೆ ವಿಭಜಕಗಳನ್ನು ನಿರ್ಮಿಸಲಾಗಿದೆ. ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT