ನಿಪ್ಪಾಣಿ: ‘ಜೊಲ್ಲೆ ಎಜುಕೇಶನ್ ಸೊಸೈಟಿಯ ಶಿವಶಂಕರ ಜೊಲ್ಲೆ ಪಬ್ಲಿಕ್ ಶಾಲೆಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ಮತ್ತು ರೊಬೊಟಿಕ್ಸ್ ಶಿಕ್ಷಣ ಒದಗಿಸಲಿದ್ದು, ಇದಕ್ಕಾಗಿ ಪ್ರಯೋಗಾಲಯ ರಚಿಸಲಾಗುವುದು’ ಎಂದು ಜೊಲ್ಲೆ ಗ್ರೂಪ್ನ ಉಪಾಧ್ಯಕ್ಷ ಬಸಪ್ರಸಾದ ಜೊಲ್ಲೆ ಹೇಳಿದರು.

ಶಿವಶಂಕರ ಜೊಲ್ಲೆ ಶಾಲೆಯಲ್ಲಿ ಜರುಗಿದ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ‘ತಾಲ್ಲೂಕಿನ ಅಭಿವೃದ್ಧಿಗಾಗಿ ಸರ್ಕಾರದ ಯೋಜನೆಗಳನ್ನು ಅರ್ಹರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಜೊಲ್ಲೆ ಗ್ರೂಪ್ನಿಂದ ಹಾಲಶುಗರ್ ಸಕ್ಕರೆ ಕಾರ್ಖಾನೆ ಅಭಿವೃದ್ಧಿಗಾಗಿ ಆರ್ಥಿಕ ಸಹಾಯ ನೀಡಿದೆ’ ಎಂದರು.

‘ಅಣ್ಣಾಸಾಹೇಬ ಜೋಲ್ಲೆ ಪದವಿ ಪೂರ್ವ ವಸತಿ ಕಾಲೇಜಿನಲ್ಲಿ 40 ಅತ್ಯುತ್ತಮ ವಿದ್ಯಾರ್ಥಿಗಳಿಗೆ ₹1ಕೋಟಿ ವಿದ್ಯಾರ್ಥಿವೇತನದೊಂದಿಗೆ ಉಚಿತ ಶಿಕ್ಷಣ ನೀಡಲಾಗುವುದು’ ಎಂದರು.

ಪ್ರಾಚಾರ್ಯೆ ಊರ್ಮಿಳಾ ಪಾಟೀಲ, ಬಸವ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿದರು. ಜ್ಯೋತಿಪ್ರಸಾದ ಜೊಲ್ಲೆ, ಹಾಲಶುಗರ್ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಪವನ ಪಾಟೀಲ, ವಿಜಯ ರಾವುತ, ಮಹಾದೇವ ಪಾಟೀಲ, ನಂದಾ ಚಿರಮುರೆ, ದೀಪಕ ಪಾಟೀಲ, ವಿಜಯ ನಾಯಕ, ಆರ್.ವಿ. ಖೋತ, ಪ್ರಿಯಾ ಜೊಲ್ಲೆ, ಯಶಸ್ವಿನಿ ಜೊಲ್ಲೆ, ಜಯವಂತ ಭಾಟಲೆ, ರಾಜು ಗುಂಡೇಶಾ, ಸಮಿತ ಸಾಸನೆ, ಪ್ರಣವ ಮಾನವಿ ದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.