ಬೆಳಗಾವಿಗೆ ಬಂದ ಏರ್‌ಬಸ್‌ ವಿಮಾನ

7

ಬೆಳಗಾವಿಗೆ ಬಂದ ಏರ್‌ಬಸ್‌ ವಿಮಾನ

Published:
Updated:
Deccan Herald

ಬೆಳಗಾವಿ: ಇದೇ ಮೊದಲ ಬಾರಿಗೆ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಶುಕ್ರವಾರ ಬೆಳಿಗ್ಗೆ ಬಂದಿಳಿದ ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಯ ಏರ್‌ಬಸ್‌ 319ಗೆ ಜಲಫಿರಂಗಿ ಸ್ವಾಗತ ನೀಡಲಾಯಿತು.

ಬೆಂಗಳೂರಿನಿಂದ ಬೆಳಿಗ್ಗೆ 7.25ಕ್ಕೆ ಪ್ರಯಾಣ ಬೆಳೆಸಿದ್ದ ಈ ವಿಮಾನವು ಬೆಳಗಾವಿಗೆ ಬೆಳಿಗ್ಗೆ 8.30ಕ್ಕೆ ಆಗಮಿಸಿತ್ತು. 122 ಆಸನಗಳ ಸಾಮರ್ಥ್ಯದ ಈ ವಿಮಾನದಲ್ಲಿ 83 ಜನ ಪ್ರಯಾಣಿಸಿದ್ದರು. ಬೆಳಿಗ್ಗೆ 9.30ಕ್ಕೆ ಬೆಂಗಳೂರಿಗೆ ಮರಳಿ ಹೊರಟ ಇದೇ ವಿಮಾನದಲ್ಲಿ 104 ಜನರು ಪ್ರಯಾಣಿಸಿದರು.

ಸಂಸದ ಪ್ರಕಾಶ ಹುಕ್ಕೇರಿ, ನಗರ ಪೊಲೀಸ್‌ ಆಯುಕ್ತ ಡಿ.ಸಿ. ರಾಜಪ್ಪ, ವಾಣಿಜ್ಯೋದ್ಯಮಿಗಳ ಸಂಘದ ಬೆಳಗಾವಿ ಘಟಕದ ಅಧ್ಯಕ್ಷ ಉಮೇಶ ಶರ್ಮಾ ಸೇರಿದಂತೆ ಹಲವು ಗಣ್ಯರು ಸ್ವಾಗತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿಮಾನ ಆಗಮಿಸಿದ ನಂತರ ಕೇಕ್‌ ಕತ್ತರಿಸಿ, ಸಂಭ್ರಮಿಸಿದರು. ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಸೋಮವಾರ, ಗುರುವಾರ, ಶುಕ್ರವಾರ ಹಾಗೂ ಭಾನುವಾರ ಏರ್‌ಬಸ್‌ ವಿಮಾನ ಹಾರಾಟ ನಡೆಸಲಿದೆ. ಇನ್ನುಳಿದ ಮೂರು ದಿನಗಳಲ್ಲಿ ಎಟಿಆರ್‌ ವಿಮಾನ ಹಾರಾಟ ಮಾಡುತ್ತಿದೆ.

Tags: 

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !