ಆನಂದ ಚೋಪ್ರಾ ಮೇಲೆ ಹಲ್ಲೆ; 5ನೇ ಆರೋಪಿ ಬಂಧನ

7

ಆನಂದ ಚೋಪ್ರಾ ಮೇಲೆ ಹಲ್ಲೆ; 5ನೇ ಆರೋಪಿ ಬಂಧನ

Published:
Updated:

ಸವದತ್ತಿ/ ಬೆಳಗಾವಿ: ಕಾಂಗ್ರೆಸ್‌ ಮುಖಂಡ ಆನಂದ ಚೋಪ್ರಾ ಅವರ ಮೇಲೆ ಹಲ್ಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿ ಸಾಗರ ಉಮೇಶ ನಿರಲಗಿ (27) ಎಂಬಾತನನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.

‘ಸವದತ್ತಿಯಲ್ಲಿ ಸಾಗರನನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಐದು ಜನ ಆರೋಪಿಗಳನ್ನು ಬಂಧಿಸಿದಂತಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಧೀರಕುಮಾರ ರೆಡ್ಡಿ ತಿಳಿಸಿದ್ದಾರೆ.

ಹುಕ್ಕೇರಿ ತಾಲ್ಲೂಕಿನ ಪಾಶ್ಚಾಪುರದ ನಿವಾಸಿ ಸಾಗರ ಸವದತ್ತಿಯ ಬಾರ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಪ್ರಕರಣದ ಪ್ರಮುಖ ಆರೋಪಿ ಮಂಜು ಪಾಚಂಗಿ ಅವರ ಸಹವರ್ತಿಯಾಗಿದ್ದ ಎಂದು ಹೇಳಲಾಗುತ್ತಿದೆ. ಕಳೆದ ಜುಲೈ ತಿಂಗಳಿನ 28ರಂದು ರಾತ್ರಿ ಸವದತ್ತಿಯ ಎಸ್‌ಎಲ್‌ಒ ಕ್ರಾಸ್‌ ಬಳಿ ಆನಂದ ಚೋಪ್ರಾ ಅವರ ಮೇಲೆ ತೀವ್ರ ಹಲ್ಲೆ ಮಾಡಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !