ಆನಂದ ಚೋಪ್ರಾ ಕೊಲೆ ಯತ್ನ: ಮೂವರ ಬಂಧನ

7

ಆನಂದ ಚೋಪ್ರಾ ಕೊಲೆ ಯತ್ನ: ಮೂವರ ಬಂಧನ

Published:
Updated:

ಬೆಳಗಾವಿ: ‘ಸವದತ್ತಿ–ಯಲ್ಲಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಜಿತರಾಗಿದ್ದ ಆನಂದ ಚೋಪ್ರಾ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ, ಸವದತ್ತಿ ನಿವಾಸಿಗಳಾದ ಮೂವರು ಆರೋಪಿಗಳನ್ನು ಸೋಮವಾರ ಬಂಧಿಸಲಾಗಿದೆ’ ಎಂದು ಎಸ್ಪಿ ಸುಧೀರ್‌ಕುಮಾರ್‌ ರೆಡ್ಡಿ ತಿಳಿಸಿದ್ದಾರೆ.

‘ಸವದತ್ತಿಯಲ್ಲಿ ಲೇವಾದೇವಿ ವ್ಯವಹಾರ ನಡೆಸುತ್ತಿರುವ ಮಂಜು ಪಾಚಂಗಿ (30), ಗುತ್ತಿಗೆದಾರ ಸುನೀಲ್‌ ತಾರಿಹಾಳ (33) ಹಾಗೂ ಕೃಷಿಕ ಬಸವರಾಜ ಅರ್ಮನಿ (33) ಬಂಧಿತರು. ಅವರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್‌ ವಶಕ್ಕೆ ಪಡೆಯಲಾಗುವುದು. ತಲೆಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ಈವರೆಗೆ ನಡೆಸಿರುವ ವಿಚಾರಣೆ ಪ್ರಕಾರ, ಮಂಜು ಪಾಚಂಗಿ ಪ್ರಮುಖ ಸೂತ್ರಧಾರನಾಗಿರುವುದು ಕಂಡುಬಂದಿದೆ. ಹಣಕಾಸಿನ ವ್ಯವಹಾರ ಕಾರಣ ಎನ್ನುವುದು ಗೊತ್ತಾಗಿದೆ. ತನಿಖೆ ಹಾಗೂ ವಿಚಾರಣೆ ಮುಂದುವರಿದಿದೆ’ ಎಂದು ಹೇಳಿದ್ದಾರೆ.

ಸವದತ್ತಿಯ ಎಸ್‌ಎಲ್ಒ ಕ್ರಾಸ್‌ನಲ್ಲಿ ಶನಿವಾರ ತಡರಾತ್ರಿ ಘಟನೆ ನಡೆದಿತ್ತು. ತನಿಖೆಗಾಗಿ ಮೂರು ತಂಡಗಳನ್ನು ರಚಿಸಲಾಗಿದ್ದು, 9 ಮಂದಿಯನ್ನು ಭಾನುವಾರವೇ ವಿಚಾರಣೆಗೆ ಒಳಪಡಿಸಲಾಗಿತ್ತು.

ಚೋಪ್ರಾ ಅವರಿಗೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !