ಅಥಣಿ: ಕೌಟುಂಬಿಕ ಕಲಹದಿಂದ ಮನಸ್ತಾಪಗೊಂಡು ಅಥಣಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕಳೆದ 15 ದಿನಗಳ ಹಿಂದೆ ಮಧ್ಯರಾತ್ರಿ ಅಲೆದಾಡುತ್ತಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಕಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದರು.

ಅಥಣಿ ಪೊಲೀಸ್ ಅಧಿಕಾರಿಗಳ ಸಹಕಾರದೊಂದಿಗೆ ನಿರ್ಗತಿಕರ, ಅನಾಥ ಮಕ್ಕಳ ಸಂರಕ್ಷಕ ನಿಜಪ್ಪ ಹಿರೇಮನಿ ದಂಪತಿ ತಮ್ಮ ‘ಶ್ರೀಮತಿ ಕಮಲಾ ವೃದ್ಧಾಶ್ರಮ‘ದಲ್ಲಿ ಈ ಮಾನಸಿಕ ಅಸ್ವಸ್ಥ ವ್ಯಕ್ತಿಗೆ ಆಶ್ರಯ ನೀಡಿ ಮಾನವೀಯತೆ ಮೆರೆದಿದ್ದಾರೆ.

ಮಾನಸಿಕವಾಗಿ ಅಸ್ವಸ್ಥ ವ್ಯಕ್ತಿಯನ್ನು ನೆರೆಯ ಮಹಾರಾಷ್ಟ್ರದ ಪಂಡರಪುರ ಜಿಲ್ಲೆಯ ಕುರಡವಾಡಿ ಗ್ರಾಮದ ದತ್ತಾ ರಾವತ್ (60) ಎನ್ನಲಾಗಿದೆ. ಇವರಿಗೆ ಪತ್ನಿ, ಇಬ್ಬರು ಮಕ್ಕಳು ಇದ್ದು, ಆದರೆ ಕೌಟುಂಬಿಕ ಕಲಹದಿಂದ ಮನಸ್ತಾಪಗೊಂಡು ಕಳೆದ ಮೂರು ವರ್ಷಗಳಿಂದ ಮನೆ ತೊರೆದು ಊರಿಂದ ಊರಿಗೆ ಅಲಿದಾಡುತ್ತಿದ್ದಾರೆ. ಇವತ್ತಿನ ತಮ್ಮ ಆಶ್ರಮಕ್ಕೆ ಕರೆತಂದ ನಿಜಪ್ಪ ಹಿರೇಮನಿ ದಂಪತಿ ಆ ಮಾನಸಿಕ ಅಸ್ವಸ್ಥನಿಗೆ ಸ್ವಚ್ಛಗೊಳಿಸಿ, ಬಟ್ಟೆ ನೀಡಿ, ಊಟ ಉಪಚಾರ ಮಾಡಿದ್ದಲ್ಲದೆ, ವೈದ್ಯಕೀಯ ಸೌಲಭ್ಯ ನೀಡಿ 15 ದಿನಗಳ ಕಾಲ ತಮ್ಮ ಸಂಸ್ಥೆಯಲ್ಲಿ ಆಶ್ರಯ ನೀಡಿ ಆತನಿಗೆ ಜೀವನದ ಮೌಲ್ಯಗಳನ್ನು ತಿಳಿ ಹೇಳುವ ಮೂಲಕ ಮನ ಪರಿವರ್ತಿಸಿ ಪೊಲೀಸ್ ಸಿಬ್ಬಂದಿಗಳ ಸಹಕಾರದ ಮೂಲಕ ಸ್ವಗ್ರಾಮಕ್ಕೆ ಕಳುಹಿಸಿದ್ದಾರೆ. ಹಿರೇಮನಿ ದಂಪತಿ ಮಾಡಿದ ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.