ಶುಕ್ರವಾರ, ನವೆಂಬರ್ 15, 2019
22 °C

ಸ್ಮಾರ್ಟ್ ವೆಹಿಕಲ್ ಅಸೆಸ್‌ಮೆಂಟ್ ಸಿಸ್ಟಮ್ ಪ್ರಾಜೆಕ್ಟ್‌ ಸ್ಪರ್ಧೆಯಲ್ಲಿ ಪ್ರಶಸ್ತಿ

Published:
Updated:
Prajavani

ಬೆಳಗಾವಿ: ಇಲ್ಲಿನ ಕೆಎಲ್‌ಇ ಡಾ.ಎಂ.ಎಸ್. ಶೇಷಗಿರಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜಿನ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್‌ ಸೈನ್ಸ್ ವಿಭಾಗದ 3ನೇ ವರ್ಷದ ವಿದ್ಯಾರ್ಥಿಗಳು ಥೈಲ್ಯಾಂಡ್ ವಿಶ್ವವಿದ್ಯಾಲಯದಲ್ಲಿ ನಡೆದ ಪ್ರಾಜೆಕ್ಟ್‌ ಸ್ಪರ್ಧೆಯಲ್ಲಿ ‘ಸ್ಮಾರ್ಟ್‌ ವೆಹಿಕಲ್ ಅಸೆಸ್‌ಮೆಂಟ್ ಸಿಸ್ಟಮ್’ ಪ್ರಾಜೆಕ್ಟ್‌ಗೆ ಪ್ರಶಸ್ತಿ ಪಡೆದಿದ್ದಾರೆ.

ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್ ವಿಭಾಗದ ಪ್ರೊ.ರಾಖಿ ಕಳ್ಳಿಮನಿ ಅವರ ಮಾರ್ಗದರ್ಶನದಲ್ಲಿ ಕೃಷ್ಣಾ ಪೈ, ವಿನಾಯಕ, ಜಯವಂತ, ಪ್ರಾಚಿ ಪಾಟೀಲ, ಮಾನಸಿ ಕುಡಚಿ ಯೋಜನೆ ಸಿದ್ಧಪಡಿಸಿದ್ದರು. ರಸ್ತೆ ಅಪಘಾತಗಳನ್ನು ತಡೆಗಟ್ಟಲು ವಾಹನ ಸವಾರರಿಗೆ ಸಂದೇಶ ರವಾನಿಸುವ ತಂತ್ರಜ್ಞಾನವನ್ನು ಇದು ಒಳಗೊಂಡಿದೆ. ವಿದ್ಯಾರ್ಥಿಗಳನ್ನು ಪ್ರಾಚಾರ್ಯ ಡಾ.ಬಸವರಾಜ ಕಟಗೇರಿ, ವಿಭಾಗದ ಮುಖ್ಯಸ್ಥ ಪ್ರೊ.ಅರುಣ ಶಿರಾಳಕರ ಹಾಗೂ ಪ್ರಾಧ್ಯಾಪಕರು ಅಭಿನಂದಿಸಿದ್ದಾರೆ.

ಪ್ರತಿಕ್ರಿಯಿಸಿ (+)