ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೈಲಹೊಂಗಲ | ಚಿನ್ನಾಭರಣ, ನಗದು ಹಣ ಕಳವು

Published 12 ಜೂನ್ 2024, 14:25 IST
Last Updated 12 ಜೂನ್ 2024, 14:25 IST
ಅಕ್ಷರ ಗಾತ್ರ

ಬೈಲಹೊಂಗಲ: ಪಟ್ಟಣದ ಧಾರವಾಡ ರಸ್ತೆಯ ಹೊಸಮನಿ ಚಾಳದಲ್ಲಿ ಎರಡು ಮನೆಗಳಿಗೆ‌ ಕನ್ನ‌ ಹಾಕಿದ ಖದೀಮರು ಬಂಗಾರ, ಬೆಳ್ಳಿ, ನಗದು ದೋಚಿ ಪರಾರಿಯಾಗಿರುವ‌ ಘಟನೆ‌ ಮಂಗಳವಾರ ‌ರಾತ್ರಿ ನಡೆದಿದೆ.

ಹೊಸಮನಿ ಚಾಳದ ಗೀತಾ ಸಂಜಯ ಭರಮಣ್ಣವರ ಅವರಿಗೆ ಸೇರಿದ್ದ ಮನೆಯಲ್ಲಿನ 3 ತೊಲೆ ಬಂಗಾರ, 30 ತೊಲೆ ಬೆಳ್ಳಿ, ₹ 8 ಸಾವಿರ ನಗದು ಕಳ್ಳತನ ಮಾಡಲಾಗಿದೆ. ಪಕ್ಕದ ಮನೆಗೆ ಕನ್ನ ಹಾಕಿದ ಖದೀಮರು ಏನೂ ಸಿಗದ ಕಾರಣ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸ್ ಶ್ವಾನ ದಳ, ಬೆರಳುಚ್ಚ ತಜ್ಞರು ಭೇಟಿ ಪರಿಶೀಲನೆ ನಡೆಸಿದರು. ಪಿಎಸ್ಐಗಳಾದ ಗುರುರಾಜ ಕಲಬುರಗಿ, ರಾಜು ಮಮದಾಪೂರ ಹಾಗೂ ಸಿಬ್ಬಂದಿ ಭೇಟಿ ನೀಡಿ, ಕಳ್ಳರ ಬಂಧನಕ್ಕೆ ಜಾಲ ಬೀಸಿದ್ದಾರೆ.

ಈ ಕುರಿತು ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT