ಬಸವಣ್ಣ ಮಾನವತಾವಾದಿ, ವಿಶ್ವಗುರು

ಶನಿವಾರ, ಮೇ 25, 2019
22 °C
ಬಸವ ಮಂಟಪದಲ್ಲಿ ಜಯಂತ್ಯುತ್ಸವ

ಬಸವಣ್ಣ ಮಾನವತಾವಾದಿ, ವಿಶ್ವಗುರು

Published:
Updated:
Prajavani

ಬೆಳಗಾವಿ: ‘ಮಹಾ ಮಾನವತಾವಾದಿ ಬಸವಣ್ಣ ವಿಶ್ವಗುರುವಾಗಿದ್ದಾರೆ. ಸಮಾಜದಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿದ ಪ್ರವಾದಿ ಪುರುಷ’ ಎಂದು ಮುಖಂಡ ರಮೇಶ ಭೈರಾಜಿ ಹೇಳಿದರು.

ಮಹಾಂತೇಶ ನಗರದ ವಿಶ್ವಗುರು ಬಸವ ಜಯಂತ್ಯುತ್ಸವ ಸಮಿತಿ, ಜಿಲ್ಲಾ ಲಿಂಗಾಯತ ಧರ್ಮ ಮಹಾಸಭಾ, ರಾಷ್ಟ್ರೀಯ ಬಸವ ದಳ, ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣ, ಗಣಾಚಾರ ದಳ, ವಚನ ಚಿಂತನಾ ವೇದಿಕೆ ಮತ್ತು ಬಸವಾಂಕುರ ಸಹಯೋಗದಲ್ಲಿ ಗೋಕಾಕ ರಸ್ತೆಯ ವಿಶ್ವಗುರು ಬಸವ ಮಂಟಪದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಸವಣ್ಣ ನೀಡಿದ ವಿಶೇಷ ಕೊಡುಗೆಗಳ ಬಗ್ಗೆ ವಿದೇಶಗಳ ಮಹಾನ್ ವಿದ್ವಾಂಸರು, ಚಿಂತಕರು, ನೇತಾರರು ಕೂಡ ‍ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದು ಸ್ಮರಿಸಿದರು.

ಶಾಸಕ ಅನಿಲ ಬೆನಕೆ, ರಾಷ್ಟ್ರೀಯ ಬಸವ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಗುಡಸ, ಗುರು ಬಸವಣ್ಣ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ರಾಜು ಪದ್ಮಣ್ಣನವರ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಪರುಶೆಟ್ಟಿ, ಮುಖಂಡ ಮಹಾಂತೇಶ ತಿಗಡಿ ಮಾತನಾಡಿದರು.

ಕಲ್ಲುಮಠದ ಶಶಿಧರಯ್ಯ ಹಿರೇಮಠ ಅವರು ಹವಾನಿಯಂತ್ರಿತ ಮುಕ್ತಿ ವಾಹನ ಲೋಕಾರ್ಪಣೆ ಮಾಡಿದರು. ದಾನಿಗಳಾದ ಬಸವ ಕಾಯಕ ಜೀವಿಗಳ ಸಂಘದ ಪ್ರಧಾನ ಸಂಚಾಲಕ ಸೂರ್ಯಕಾಂತ ಭಾವಿ ದಂಪತಿಯನ್ನು ಅಭಿನಂದಿಸಿದರು.

ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಚನ ಕಂಠಪಾಠ ಸ್ಪರ್ಧೆ ಹಿರಿಯರ ವಿಭಾಗದಲ್ಲಿ ಅಕ್ಕಮಹಾದೇವಿ ಬಾಬಾನಗರ ಪ್ರಥಮ, ಪ್ರತಿಭಾ ಗುಡಸ್ ಮತ್ತು ರೂಪಾ ಪ್ರಸಾದ್ 2ನೇ ಸ್ಥಾನ, ನೀಲಗಂಗಾ ಪಾಟೀಲ ಮತ್ತು ತೃಪ್ತಿ ಕಾಜಗಾರ 3ನೇ ಸ್ಥಾನ ಹಂಚಿಕೊಂಡರು. ಕಿರಿಯರ ವಿಭಾಗದಲ್ಲಿ ಬಸವ ಪ್ರೇಮ ಮತ್ತು ಬಸವದೀಕ್ಷಾ ಮೊದಲ ಎರಡು ಬಹುಮಾನ ಪಡೆದರು. 3ನೇ ಬಹುಮಾನವನ್ನು ಬಸವಾಕ್ಷರ ಮತ್ತು ಬಸವ ಸ್ವರೂಪ ಹಂಚಿಕೊಂಡರು.

ವಚನ ಗಾಯನ: ಹಿರಿಯರ ವಿಭಾಗದಲ್ಲಿ ಗಿರಿಜಾ ಪರಂಡಿ, ರೂಪಾ ಪ್ರಸಾದ್ ಮತ್ತು ಶಿವಶಂಕರಯ್ಯ ಅಲ್ಲಯ್ಯನವರಮಠ, ಕಿರಿಯರ ವಿಭಾಗದಲ್ಲಿ ಬಸವದೀಕ್ಷಾ, ಬಸವಾಕ್ಷರ ಮತ್ತು ಬಸವ ಸ್ವರೂಪ ಕ್ರಮವಾಗಿ ಮೊದಲ ಮೂರು ಬಹುಮಾನ ಗಳಿಸಿದರು.

ಆಶುಭಾಷಣ ಸ್ಪರ್ಧೆಯಲ್ಲಿ ನೀಲಗಂಗಾ ಪಾಟೀಲ, ಶಂಕರ ತಿಪ್ಪಾ ಮತ್ತು ರೂಪಾ ಪ್ರಸಾದ್, ರಂಗೋಲಿ ಸ್ಪರ್ಧೆಯಲ್ಲಿ ತೃಪ್ತಿ ಕಾಜಗಾರ ಮತ್ತು ಅಕ್ಕಮಹಾದೇವಿ ಬಾಬಾನಗರ, ಶಾಂಭವಿ ಮತ್ತು ಗಿರಿಜಾ ಪರಂಡೆ ಮೊದಲ ಹಾಗೂ 2ನೇ ಸ್ಥಾನಗಳನ್ನು ಗಳಿಸಿದರು. ಪ್ರಾರ್ಥನಾ ಗುಡಸ 3ನೇ ಸ್ಥಾನ ಪಡೆದರು. ರಾಣಿ ಪರಂಡಿ, ಪ್ರಜ್ಞಾ ಗುಡಸ, ಅನುಪಮಾ ತಿಪ್ಪಾ ಸಮಾಧಾನಕರ ಬಹುಮಾನ ಪಡೆದರು.

ಪ್ರಬಂಧ ಸ್ಪರ್ಧೆಯಲ್ಲಿ ರಮೇಶ ಭೈರಾಜಿ, ರೂಪಾ ಪ್ರಸಾದ, ಶೀಲಾ ಗುಡಸ್, ಸಹನಾ ಉಳ್ಳಿಗೇರಿ, ವಚನಾ ಗುಡಸ ಮತ್ತು ಶರಣ ಶಿ.ಅಲ್ಲಯ್ಯನವರಮಠ ಮೊದಲ ಮೂರು ಬಹುಮಾನ ಗಳಿಸಿದರು. ಸರೋಜಿನಿ ಅಲ್ಲಯ್ಯನವರಮಠ ಸಮಾಧಾನಕರ ಬಹುಮಾನ ಗಳಿಸಿದರು.

ರಾಷ್ಟ್ರೀಯ ಬಸವ ದಳ ಬೆಳಗಾವಿ ಅಧ್ಯಕ್ಷ ಕೆ. ಬಸವರಾಜ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಆನಂದ ಗುಡಸ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !