ಬೆಳಗಾವಿ: ಶನಿವಾರ (ಫೆ.28)ರಿಂದ ಆರಂಭವಾಗುವ ಈ ಬಾರಿಯ ಪಿಯು ದ್ವಿತೀಯ ವಾರ್ಷಿಕ ಪರೀಕ್ಷೆಗೆ ಎರಡೂ ಶೈಕ್ಷಣಿಕ ಜಿಲ್ಲೆಗಳಿಂದ ಒಟ್ಟು 51,938 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಒಟ್ಟು 95 ಪರೀಕ್ಷಾ ಕೇಂದ್ರಗಳನ್ನು ಸಿದ್ಧಪಡಿಸಲಾಗಿದ್ದು, 27 ರೂಟ್ಗಳನ್ನು ನಿಗದಿಗೊಳಿಸಲಾಗಿದೆ.
.ದ್ವಿತೀಯ ಪಿಯು ಪರೀಕ್ಷೆ: ಮೈಸೂರು ಜಿಲ್ಲೆಯಲ್ಲಿ 35,818 ವಿದ್ಯಾರ್ಥಿಗಳ ನೋಂದಣಿ.
ಎರಡೂ ಜಿಲ್ಲೆಗಳು ಸೇರಿ ಈ ಬಾರಿ 47,091 ವಿದ್ಯಾರ್ಥಿಗಳು ಹೊಸದಾಗಿ ಪರೀಕ್ಷೆಗೆ ಹಾಜರಾಗಲಿದ್ದಾರೆ. ಜತೆಗೆ, 1,115 ಪರೀಕ್ಷಾರ್ಥಿಗಳು ಖಾಸಗಿಯಾಗಿ, 3,695 ರಿಪಿಟರ್ಸ್ ಹಾಗೂ 37 ಮಂದಿ ಸುಧಾರಣಾ ಪರೀಕ್ಷಾರ್ಥಿಗಳಾಗಿ ನೋಂದಣಿ ಮಾಡಿಕೊಂಡಿದ್ದಾರೆ.

ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 22,411 ಮಂದಿ ಪರೀಕ್ಷಾರ್ಥಿಗಳಿದ್ದು, 19,981 ಮಂದಿ ಮೊದಲಬಾರಿ ಹಾಜರಾಗಲಿದ್ದಾರೆ. ಅದೇ ರೀತಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 29,527 ಮಂದಿ ನೋಂದಣಿ ಮಾಡಿಕೊಂಡಿದ್ದು ಇದರಲ್ಲಿ 27,110 ಹೊಸದಾಗಿ ಪರೀಕ್ಷೆ ಬರೆಯಲಿದ್ದಾರೆ. ಚಿಕ್ಕೋಡಿಯಲ್ಲಿ 54 ಕೇಂದ್ರ ಹಾಗೂ ಬೆಳಗಾವಿಯಲ್ಲಿ 41 ಪರೀಕ್ಷಾ ಕೇಂದ್ರಗಳು ಇವೆ.

ಇಲಾಖೆಯಿಂದ ಸಂಪೂರ್ಣ ಸಿದ್ಧತೆ: ಪದವಿಪೂರ್ವ ಶಿಕ್ಷಣ ಇಲಾಖೆಯ ಮಾರ್ಗದರ್ಶಿ ಪ್ರಕಾರ ಎರಡೂ ಜಿಲ್ಲೆಗಳಲ್ಲಿ ಸುಗಮವಾಗಿ ಪರೀಕ್ಷೆಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಡಿಡಿಪಿಯು ಎಂ.ಎಂ. ಕಾಂಬಳೆ ತಿಳಿಸಿದ್ದಾರೆ.
.ದ್ವಿತೀಯ ಪಿಯು ವಿಜ್ಞಾನ: ಮಾ.1ರಂದು ಪ್ರವೇಶ ಪರೀಕ್ಷೆ.
ಪ್ರಶ್ನೆ ಪತ್ರಿಕೆಗಳನ್ನು ಜತನ ಮಾಡಲು ಈ ಬಾರಿ ‘ತ್ರಿ–ಮ್ಯಾನ್ ಕಮಿಟಿ’ ಮಾಡಲಾಗಿದೆ. ಇದರಲ್ಲಿ ವಿಶೇಷ ಜಿಲ್ಲಾಧಿಕಾರಿ, ಜಿಲ್ಲಾ ಖಜಾನಾಧಿಕಾರಿ ಹಾಗೂ ಡಿಡಿಪಿಯು ಇರುತ್ತಾರೆ. ಮೂವರ ಸಮ್ಮುಖದಲ್ಲಿ ಖಜಾನೆಯಿಂದ ತೆಗೆಯುವ ಪ್ರಶ್ನೆ ಪತ್ರಿಕೆಗಳ ಬಂಡಲ್ಗಳನ್ನು ಸರಬರಾಜು ಮಾಡಲು ರೂಟ್ ಆಫೀಸರ್ಗಳನ್ನೂ ನಿಯೋಜನೆ ಮಾಡಲಾಗಿದೆ. ಯಾವುದೇ ಪರಿಸ್ಥಿತಿಯಲ್ಲಿ ಪ್ರಶ್ನೆ ಪತ್ರಿಕೆ ಬಹಿರಂಗವಾಗದಂತೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಎಲ್ಲ ಪರೀಕ್ಷಾ ಕೊಠಡಿಗಳಲ್ಲೂ ಸಿಸಿಟಿವಿ ಕಣ್ಗಾವಲು ಇರಲಿದೆ. ನಕಲಿಗೆ ಅವಕಾಶ ಸಾಧ್ಯವಾಗದಂತೆ ನಿಗಾ ವಹಿಸಲಾಗಿದೆ. ವಿದ್ಯಾರ್ಥಿಗಳು ಭಯ ಬಿಟ್ಟು ಪರೀಕ್ಷೆ ಬರೆಯಬೇಕು ಎಂದೂ ಹೇಳಿದರು.

ಎರಡು ಪೂರ್ವಬಾವಿ ಪರೀಕ್ಷೆಗಳಲ್ಲೂ ಫೇಲ್

ಪ್ರತಿ ವಾರ್ಷಿಕ ಪರೀಕ್ಷೆಗೂ ಮುನ್ನ ಒಂದು ಪೂರ್ವಭಾವಿ ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ, ಈ ಬಾರಿ ವಿದ್ಯಾರ್ಥಿಗಳ ಭಯ ಹೋಗಲಾಡಿಸಲು ಸರಣಿಯಾಗಿ ಎರಡು ಪೂರ್ವಭಾವಿ ಪರೀಕ್ಷೆ ತೆಗೆದುಕೊಳ್ಳಲಾಗಿದೆ.

ಮೊದಲ ಸರಣಿಯಲ್ಲಿ ಶೇ 64 ಹಾಗೂ ಎರಡನೇ ಸರಣಿಯಲ್ಲಿ ಶೇ 66.60 ಫಲಿತಾಂಶ ಬಂದಿದೆ. ಅಂದರೆ, ಎರಡೂ ಪರೀಕ್ಷೆಗಳಲ್ಲಿ ಶೇ 35ರಷ್ಟು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.

ಇಂಥವರಿಗೆ ನಿರಂತರ ತರಬೇತಿ ನೀಡಿ ಪಾಸ್ ಆಗುವಂತೆ ಆತ್ಮವಿಶ್ವಾಸ ತುಂಬಲಾಗಿದೆ ಎಂದು ಡಿಡಿಪಿಯು ತಿಳಿಸಿದರು.
.ದ್ವಿತೀಯ ಪಿಯುಸಿ: ಕಳೆದ ಬಾರಿ ಕೋಲಾರ ಜಿಲ್ಲೆಗೆ 16ನೇ ಸ್ಥಾನ, ಈ ಸಲ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.