ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಗವಾಡ | ಗಾಂಜಾ ವಶ: ಮೂವರ ಬಂಧನ

Published : 6 ಆಗಸ್ಟ್ 2024, 14:17 IST
Last Updated : 6 ಆಗಸ್ಟ್ 2024, 14:17 IST
ಫಾಲೋ ಮಾಡಿ
Comments

ಕಾಗವಾಡ: ಪಟ್ಟಣದಿಂದ ಚಿತ್ರದುರ್ಗದ ಕಡೆಗೆ ಹೊರಟಿದ್ದ ಕಾರಿನಲ್ಲಿದ್ದ 3 ಕೆಜಿ 75 ಗ್ರಾಂ ಗಾಂಜಾ, ಕಾರನ್ನು ಇಲ್ಲಿನ ಪೊಲೀಸರು ಜಪ್ತಿ ಮಾಡಿಕೊಂಡಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. 

ಖಚಿತ ಮಾಹಿತಿ ಮೇರೆಗೆ ಪಟ್ಟಣದ ಚನ್ನಮ್ಮಾ ವೃತ್ತದ ಸಮೀಪ ಸೋಮವಾರ ಪೊಲೀಸರು ಕಾರ್ಯಾಚರಣೆ ನಡೆಸಿದರು.

ಚಿತ್ರದುರ್ಗ ನಗರದ ನಿವಾಸಿಗಳಾದ ಫೈರೋಜ್ ನುಸರತ್, ಮಹ್ಮದಕಲಂದರ ಇಮ್ತಿಯಾಜ್‌ಶರೀಫ್, ತಂಜೀಂ ನೌಶಾಧ ಆರೋಪಿಗಳು.

ಪಿಎಸ್‌ಐ ಎಂ.ಬಿ. ಬಿರಾದಾರ, ಪಿಎಸ್‌ಐ (ಅಪರಾಧ) ಆರ್.ಎಚ್. ಬಗಲಿ ನೇತೃತ್ವದಲ್ಲಿ ಕಾಗವಾಡ ಪೋಲಿಸ್ ಠಾಣೆಯ ಪೋಲಿಸ್ ಸಿಬ್ಬಂದಿ ಯಲ್ಲಾಲಿಂಗ ಲಾಳಿ, ಸುರೇಶ ನಂದಿವಾಲೆ, ಬೀರಪ್ಪಾ ವ್ಯಾಪಾರಿ, ಅಶೋಕ ಬಾಳಿಗೇರಿ, ಅಣ್ಣಪ್ಪಾ ಹಡಪದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಈ ವೇಳೆ ಉಪತಹಶೀಲ್ದಾರ್ ಅಣ್ಣಾಸಾಬ ಕೋರೆ, ಸಿಡಿಪಿಒ ಸಂಜೀವಕುಮಾರ ಸದಲಗೆ, ಗ್ರಾಮ ಲೆಕ್ಕಾಧಿಕಾರಿ ಪ್ರಭುಕುಮಾರ ಹೊನರಡ್ಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT