ಗುರುವಾರ , ಜುಲೈ 29, 2021
21 °C

ಬೆಳಗಾವಿ | ಚರ್ಮ ಕುಶಲಕರ್ಮಿಗಳಿಗೆ ದಿನಸಿ ಕಿಟ್ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಹಮ್ಮಿಕೊಂಡಿರುವ ‘ಹಸಿದವರತ್ತ ನಮ್ಮ ಚಿತ್ತ ಅಭಿಯಾನ’ದಲ್ಲಿ, ಕೋವಿಡ್–19 ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ 60 ಬಡ ಚರ್ಮ ಕುಶಲಕರ್ಮಿಗಳ ಕುಟುಂಬಗಳಿಗೆ ದಿನಸಿ ಕಿಟ್‌ಗಳನ್ನು ಶುಕ್ರವಾರ ವಿತರಿಸಲಾಯಿತು.

ಇಲ್ಲಿನ ಕನ್ನಡ ಸಾಹಿತ್ಯ ಭವನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ನೇತೃತ್ವದಲ್ಲಿ ಕಿಟ್ ನೀಡಲಾಯಿತು.

ಇದೇ ವೇಳೆ, ಚಂದರಗಿ ಅವರನ್ನು ಕರ್ನಾಟಕ ಲೆದರ್‌ ಆರ್ಟಿಸನ್‌ ಆಸೋಸಿಯೇಷನ್‌ ಸನ್ಮಾನಿಸಲಾಯಿತು. ಮುಖಂಡರಾದ ಪರಶುರಾಮ ಬಾಹು ನಂದಿಹಳ್ಳಿ, ಮಲ್ಲೇಶ ಚೌಗಲೆ, ಸಂಘದ ಅಧ್ಯಕ್ಷರಾದ ಸಂತೋಷ ಹೊಂಗಲ, ಕಾರ್ಯದರ್ಶಿಗಳಾದ ಶಿವರಾಜ ಭೂಪಾಲ ಸೌದಾಗರ ಹಾಗೂ ಸದಸ್ಯರಾದ ಸಿದ್ದಾರೂಢ ಬನ್ನಿಗಿಡದ, ಗಣೇಶ ಕಾಳೆ, ಶಿವಾಜಿ ಪವಾರ, ಸಂಜಯ ಚೌಗಲೆ, ಸಂತೋಷ ಹೊನಕಾಂಡೆ, ತುಕಾರಾಮ ಶಿಂಧೆ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.