ಜಲಾವೃತಗೊಂಡ ಚಿಕ್ಕೋಡಿ ತಾಲ್ಲೂಕಿನ ದೂಧಗಂಗಾ ನದಿಯ ಮಲಿಕವಾಡ– ದತ್ತವಾಡ ಸೇತುವೆ
ಹುಕ್ಕೇರಿ ಸಂಕೇಶ್ವರ ಚಿಕ್ಕೋಡಿ ನಿಪ್ಪಾಣಿ ಮಾರ್ಗದಲ್ಲಿ ಸಂಚರಿಸುವ ಸವಾರರಿಗೂ ಸಂಕಟ ತಪ್ಪಿಲ್ಲ. ಈ ಮಾರ್ಗದ ರಾಷ್ಟ್ರೀಯ ಹೆದ್ದಾರಿಯ ಸೇತುವೆಗಳಲ್ಲೂ ನೀರು ನಿಂತು ಸಂಚಾರ ಅಡಚಣೆ ಆಗುತ್ತದೆ. ಬೆಳಗಾವಿ– ಯಮಕನಮರಡಿ ಮಾರ್ಗದಲ್ಲಿ ಎತ್ತರದ ಸೇತುವೆ ನಿರ್ಮಾಣ ಆರಂಭಿಸಿ ದಶಕ ಕಳೆದರೂ ಪೂರ್ಣಗೊಂಡಿಲ್ಲ. ಇದರಿಂದ ಸಂಚಾರ ಸಂಕಷ್ಟ ತಪ್ಪಿಲ್ಲ.
–ಶಿವಪ್ಪ ಆನೆಕಾಲ ರೈತ ಯಮಕನಮರಡಿ
ಈ ವರ್ಷ ಅಥಣಿ ತಾಲ್ಲೂಕಿನಲ್ಲಿ ಇಬ್ಬರು ಹಳ್ಳದ ನೀರಿನಲ್ಲಿ ಮುಳುಗು ಸತ್ತರು. ಕಳೆದ ವರ್ಷ ಮೂಡಲಗಿ ತಾಲ್ಲೂಕಿನಲ್ಲಿ ಬೈಕ್ ಸಮೇತ ತೇಲಿಹೋದರು. ಆದರೂ ಸರ್ಕಾರ ಸೇತುವೆಗಳ ಎತ್ತರ ಹೆಚ್ಚಿಸಲು ಮೀನ– ಮೇಷ ಎಣಿಸುತ್ತಿದೆ.
–ಕಿರಣ ಕೊಳವಿ ವಾಹನ ಚಾಲಕ ಅಥಣಿ
ಕಳೆದ ವರ್ಷ ನಾಲ್ಕು ಸೇತುವೆಗಳ ಮರು ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಇವು ಟೆಂಡರ್ ಹಂತಕ್ಕೆ ಬಂದಿವೆ. ಗೋಕಾಕ– ಲೋಳಸೂರು ಸೇತುವೆ ಪ್ರತಿ ವರ್ಷ ಮುಳುಗುತ್ತದೆ. ಇದನ್ನು ಕಳೆದ ವರ್ಷವೇ ಟೆಂಡರ್ ಕರೆಯಲಾಗಿದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದನ್ನು ನಿರ್ಮಾಣ ಮಾಡಲಿದೆ.
-ಗಿರೀಶ ದೇಸಾಯಿ ಕಾರ್ಯನಿರ್ವಾಹಕ ಎಂಜಿನಿಯರ್ ಲೋಕೋಪಯೋಗಿ ಇಲಾಖೆ ಚಿಕ್ಕೋಡಿ
ಸೇತುವೆಗಳ ಸದ್ಯದ ಪರಿಸ್ಥಿತಿ ಬಗ್ಗೆ ಸರ್ಕಾರದಿಂದ ವರದಿ ಕೇಳಲಾಗಿದೆ. ಬೆಳಗಾವಿ ಭಾಗದ ಐದು ಸೇತುವೆಗಳ ಮರು ನಿರ್ಮಾಣದ ಅಗತ್ಯವಿದೆ ಎಂದು ವರದಿ ನೀಡಿದ್ದೇವೆ. ಸದ್ಯ ಜಿಲ್ಲೆಯ ಜನರಿಂದ ಬೇಡಿಕೆ ಬಂದಿವೆ. ಬಜೆಟ್ ಬಂದ ಬಳಿಕ ಎಷ್ಟು ಸೇತುವೆ ನಿರ್ಮಾಣಕ್ಕೆ ಅನುಮತಿ ಸಿಗುತ್ತದೆ ನೋಡಿಕೊಂಡು ಕ್ರಮ ವಹಿಸಲಾಗುವುದು.
–ಎಸ್.ಎಸ್.ಸೊಬರದ ಕಾರ್ಯನಿರ್ವಾಹಕ ಎಂಜಿನಿಯರ್ ಲೋಕೋಪಯೋಗಿ ಇಲಾಖೆ ಬೆಳಗಾವಿ