ಬೆಂಗಳೂರು: ಎನ್ಸಿ ಕ್ಲಾಸಿಕ್ ಕೂಟದ ಮೂಲಕ ಮೊದಲ ಬಾರಿ ಬೆಂಗಳೂರಿನಲ್ಲಿ ವಿಶ್ವ ಮಟ್ಟದ ಜಾವೆಲಿನ್ ಥ್ರೊ ಕೂಟಕ್ಕೆ ಕ್ಷಣಗಣನೆ ನಡೆದಿದೆ. ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ ಸಹ ಬೆಂಗಳೂರಿನಲ್ಲಿ ಮೊದಲ ಬಾರಿ ಕಣಕ್ಕಿಳಿಯುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಆಗಮಿಸಿರುವ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದರು. ಈ ವೇಳೆ ಚೋಪ್ರಾ ಅವರನ್ನು ಮೈಸೂರು ಪೇಟಾ ತೊಡಿಸಿ ಸನ್ಮಾನಿಸಿದರು.

ಅವಳಿ ಒಲಿಂಪಿಕ್ಸ್ ಪದಕ ವಿಜೇತ, ವಿಶ್ವಶ್ರೇಷ್ಠ ಜಾವೆಲಿನ್ ಎಸೆತಗಾರರಾದ ನೀರಜ್ ಚೋಪ್ರಾ ಅವರು ಇಂದು ನನ್ನನ್ನು ಸೌಹಾರ್ದಯುತವಾಗಿ ಭೇಟಿ ಮಾಡಿದರು. ಈ ವೇಳೆ ನೀರಜ್ ಚೋಪ್ರಾ ಅವರ ಕ್ರೀಡಾ ಬದುಕು ಮತ್ತಷ್ಟು ಯಶಸ್ಸಿನಿಂದ ಕೂಡಿರಲಿ ಶುಭ ಹಾರೈಸಿದೆ ಎಂದು ಸಿಎಂ ಎಕ್ಸ್ನಲ್ಲಿ ತಿಳಿಸಿದ್ದಾರೆ.

ನಾಳೆ ಶನಿವಾರ ಸಂಜೆ 7 ಗಂಟೆಗೆ ಕೂಟ ಆರಂಭವಾಗಲಿದೆ. ಐದು ಮಂದಿ ಭಾರತದ ಸ್ಪರ್ಧಿಗಳು ಸೇರಿ 12 ಮಂದಿ ಕಣಕ್ಕಿಳಿಯುತ್ತಿದ್ದಾರೆ.

ನೀರಜ್ ಚೋಪ್ರಾ ಹೇಳಿದ್ದು..

‘ಮೊದಲ ಬಾರಿ ನಾನು ಬೆಂಗಳೂರಿನಲ್ಲಿ ಸ್ಪರ್ಧಿಸುತ್ತಿದ್ದೇನೆ. ತುಂಬಾ ಖುಷಿಯಾಗುತ್ತಿದೆ. ಅಲ್ಪಾವಧಿಯಲ್ಲೇ ಈ ಕೂಟಕ್ಕೆ ಸರ್ಕಾರ, ಕರ್ನಾಟಕ ಒಲಿಂಪಿಕ್ ಸಂಸ್ಥೆ ಸಹಾಯಹಸ್ತ ಚಾಚಿದೆ. ಬೆಂಬಲಿಸಲು ತುಂಬಾ ಅಭಿಮಾನಿಗಳು ಬರುವ ವಿಶ್ವಾಸವಿದೆ’ ಎಂದು ಒಲಿಂಪಿಕ್ಸ್ನಲ್ಲಿ ಎರಡು ಪದಕ ಗೆದ್ದಿರುವ ಚೋಪ್ರಾ ಗುರುವಾರ ನಡೆದಿದ್ದ ಸುದ್ದಿಗೋಷ್ಠಿಯಲ್ಲಿ ಕೂಟದ ಬಗ್ಗೆ ತಿಳಿಸಿದ್ದಾರೆ.

‘ಈ ಕೂಟಕ್ಕೆ ಅಥ್ಲೀಟುಗಳನ್ನು ಕರೆಸಲಾಗುತ್ತಿದೆ. ಸ್ಥಳೀಯ ಅಥ್ಲೀಟುಗಳೂ ಬರುತ್ತಿದ್ದಾರೆ. ಪೋಷಕರೂ ಮಕ್ಕಳನ್ನು ಕರೆತರಬೇಕು ಎಂಬುದು ನಮ್ಮ ಆಸೆ. ಮುಂದಿನ ದಿನಗಳಲ್ಲಿ ಜಾವೆಲಿನ್ ಜೊತೆಗೆ ಇತರ ಕೆಲವು ಸ್ಪರ್ಧೆ ಗಳನ್ನೂ ನಡೆಸುವ ಯೋಜನೆಯಿದೆ. ಇದರಿಂದ ದೇಶದ ಉದಯೋನ್ಮುಖ ಅಥ್ಲೀಟುಗಳಿಗೆ ಇಲ್ಲಿಯೇ ದೊಡ್ಡ ಮಟ್ಟದ ಕೂಟಗಳಲ್ಲಿ ಭಾಗವಹಿಸುವ ಅವಕಾಶ ದೊರೆಯಲಿದೆ’ ಎಂದರು.

ಟಿಕೆಟ್ ಎಲ್ಲಿ ಲಭ್ಯ?

ಜಾವೆಲಿನ್ ಥ್ರೋ ಸ್ಪರ್ಧೆಯನ್ನು ವೀಕ್ಷಿಸಲು ₹299 ರಿಂದ ₹9,999 ವರೆಗೆ ಟಿಕೆಟ್ ದರ ನಿಗದಿ ಮಾಡಲಾಗಿದೆ. ಟಿಕೆಟ್ ಪಡೆಯಲು ಲಿಂಕ್: https://www.district.in/events/neeraj-chopra-classic-2025-may24-2025-buy-tickets.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.