ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ: ಏಕಕಾಲಕ್ಕೆ ನಾಲ್ಕು ಕಡೆ ಲೋಕಾಯುಕ್ತ ದಾಳಿ

Published 11 ಜುಲೈ 2024, 4:57 IST
Last Updated 11 ಜುಲೈ 2024, 4:57 IST
ಅಕ್ಷರ ಗಾತ್ರ

ಬೆಳಗಾವಿ: ಬೆಳಗಾವಿ ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ದುರದುಂಡೇಶ್ವರ ಬನ್ನೂರ ಅವರ ಮನೆಯೂ ಸೇರಿದಂತೆ ನಾಲ್ಕು ಆಸ್ತಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ಬೆಳಿಗ್ಗೆ ಎರಡನೇ ಬಾರಿಗೆ ದಾಳಿ ನಡೆಸಿದರು.

ಬೆಳಗಾವಿ ತಾಲ್ಲೂಕಿನ ಯಳ್ಳೂರ ಹೊರವಲಯದಲ್ಲಿರುವ ಬನ್ನೂರ ವಾಸದ ಮನೆ, ಗೋಕಾಕ ನಗರದಲ್ಲಿರುವ ಇನ್ನೊಂದು ಮನೆ, ಹೊನಗಾದಲ್ಲಿರುವ ಫಾರ್ಮ್ ಹೌಸ್, ಹಿಂಡಲಗಾ ಗ್ರಾಮದಲ್ಲಿ ಹೊಂದಿದ ಅಪಾರ್ಟಮೆಂಟ್ ಮೇಲೂ ಏಕಕಾಲಕ್ಕೆ ದಾಳಿ‌ ನಡೆದಿದೆ.

ಗುತ್ತಿಗೆದಾರರಿಂದ ಲಂಚದ ಹಣ ಪಡೆದ ಆರೋಪದ ಮೇರೆಗೆ ನಾಲ್ಕು‌ ತಿಂಗಳ‌ ಹಿಂದೆ ಇದೇ ಆರೋಪಿಯ ಮನೆ ಮೇಲೆ ದಾಳಿ ಮಾಡಲಾಗಿತ್ತು. ಆಗ ₹ 27 ಲಕ್ಷ ನಗದು ಹಾಗೂ ಆಸ್ತಿಯ ದಾಖಲೆಗಳು ಪತ್ತೆಯಾಗಿದ್ದವು.

ಈಗ ಮತ್ತಷ್ಟು ದಾಖಲೆ‌ ಹಾಗೂ ಆಸ್ತಿ ಪತ್ತೆಗಾಗಿ ಎರಡನೇ ಬಾರಿಗೆ ದಾಳಿ‌ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಲೋಕಾಯುಕ್ತ ಡಿವೈಎಸ್ಪಿ ಭರತ್ ರೆಡ್ಡಿ ನೇತೃತ್ವದ ತಂಡದಿಂದ ದಾಳಿ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT