ಬೆಳಗಾವಿ: ಬೆಳಗಾವಿ ನೂತನ ಮೇಯರ್ ಆಗಿ ಮಂಗೇಶ ಪವಾರ ಹಾಗೂ ಉಪಮೇಯರ್ ಆಗಿ ವಾಣಿ ವಿಲಾಸ ಜೋಶಿ ಶನಿವಾರ ಬಹುಮತದಿಂದ ಆಯ್ಕೆಯಾದರು.

41ನೇ ವಾರ್ಡ್ನ ಸದಸ್ಯ ಮಂಗೇಶ ಮರಾಠಿಗರು, ವೃತ್ತಿಯಲ್ಲಿ ನೇಕಾರ. ಕನ್ನಡತಿ ವಾಣಿ 43ನೇ ವಾರ್ಡ್ನ ಸದಸ್ಯೆ. ಈ ಎರಡೂ ವಾರ್ಡ್ಗಳು ಶಾಸಕ ಅಭಯ ಪಾಟೀಲ ಪ್ರತಿನಿಧಿಸುವ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತವೆ.

ಒಟ್ಟು 65 ಮತದಾರರ ಪೈಕಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ, ಸತೀಶ ಜಾರಕಿಹೊಳಿ, ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಶಾಸಕ ಆಸಿಫ್ ಸೇಠ್ ಮತ್ತು ಒಬ್ಬ ಪಾಲಿಕೆ ಸದಸ್ಯ ಸೇರಿ ಕಾಂಗ್ರೆಸ್ನ ಐವರು ಚುನಾವಣೆಯಿಂದ ದೂರ ಉಳಿದರು.

ಮಂಗೇಶ ಮತ್ತು ಬಸವರಾಜ ಮೋದಗೇಕರ ನಡುವೆ ಮೇಯರ್ ಸ್ಥಾನಕ್ಕೆ ಚುನಾವಣೆ ಏರ್ಪಟ್ಟಿತು. ಬಿಜೆಪಿಯ ಮಂಗೇಶ ಅವರು 40, ಎಂಇಎಸ್ನ ಬಸವರಾಜ ಅವರು 20 ಮತ ಪಡೆದರು. ಉಪ ಮೇಯರ್ ಚುನಾವಣೆಯಲ್ಲಿ ಬಿಜೆಪಿಯ ವಾಣಿ ಅವರಿಗೆ 40, ಪ್ರತಿಸ್ಪರ್ಧಿ ಎಂಇಎಸ್ನ ಲಕ್ಷ್ಮಿ ಲೋಕರಿ ಅವರಿಗೆ 20 ಮತಗಳು ಬಂದವು.

ಅನರ್ಹಗೊಂಡಿದ್ದ ಸದಸ್ಯನೇ ಮೇಯರ್!

ಪತ್ನಿ ಹೆಸರಲ್ಲಿ ಮಹಾನಗರ ಪಾಲಿಕೆಯ ವಾಣಿಜ್ಯ ಮಳಿಗೆ ಪಡೆದಿದ್ದಾರೆ ಎಂಬ ಆರೋಪದಡಿ ಮಂಗೇಶ ಪವಾರ ಹಾಗೂ ಜಯಂತ ಜಾಧವ ಅವರ ಸದಸ್ಯತ್ವವನ್ನು ತಿಂಗಳ ಹಿಂದೆ ಅನರ್ಹಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಇಬ್ಬರೂ ಹೈಕೋರ್ಟ್ ಮೆಟ್ಟಿಲೇರಿದ್ದರು. ಚುನಾವಣೆ ಎರಡು ದಿನ ಬಾಕಿ ಇರುವಾಗಲೇ ಅವರ ಅನರ್ಹ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿತು.

‘ಕಾಂಗ್ರೆಸ್ ನಾಯಕರ ಮಾತು ಕೇಳಿ ಅಧಿಕಾರಿಗಳು ಮಂಗೇಶ ಅವರ ಸದಸ್ಯತ್ವ ಅನರ್ಹ ಮಾಡಿದ್ದಾರೆ. ಅವರನ್ನೇ ಮೇಯರ್ ಮಾಡಿ, ಅವರ ಎದುರು ಕಾಂಗ್ರೆಸ್ನವರು ಕೈ ಮುಗಿದು ನಿಲ್ಲುವಂತೆ ಮಾಡುತ್ತೇನೆ. ಯಾವ ಅಧಿಕಾರಿ ಅನರ್ಹ ಆದೇಶ ಹೊರಡಿಸಿದ್ದಾರೋ, ಅವರಿಂದ ಮೇಯರ್ ಪ್ರಮಾಣಪತ್ರ ಕೊಡಿಸುತ್ತೇನೆ’ ಎಂದು ಶಾಸಕ ಅಭಯ ಪಾಟೀಲ ಸವಾಲು ಹಾಕಿದ್ದರು. ಅದರಲ್ಲಿ ಅವರು ಯಶಸ್ವಿಯೂ ಆದರು. ಸಂಸದ ಜಗದೀಶ ಶೆಟ್ಟರ್, ವಿಧಾನ ಪರಿಷತ್ ಸದಸ್ಯರಾದ ಸಾಬಣ್ಣ ತಳವಾರ, ಎನ್.ರವಿಕುಮಾರ್ ಕೂಡ ಬಿಜೆಪಿ ಸದಸ್ಯರಿಗೆ ಬಂಬಲವಾಗಿ ನಿಂತರು.
.ಬೆಳಗಾವಿ | ಮೇಯರ್, ಉಪಮೇಯರ್: ಅವಿರೋಧ ಅಯ್ಕೆಗೆ ಕಸರತ್ತು.ಬೆಳಗಾವಿ | ಕಾರಿನ ಮೇಲೆ ಬಿದ್ದ ಲಾರಿ: ಇಬ್ಬರಿಗೆ ಗಂಭೀರ ಗಾಯ.ಮಹಾರಾಷ್ಟ್ರದ ಕಾಡಾನೆ ಸೆರೆಗೆ ಕರ್ನಾಟಕದ ಅರಣ್ಯ ಇಲಾಖೆಗೆ ಮೊರೆ .ಬೆಳಗಾವಿ ಪಾಲಿಕೆ ಸದಸ್ಯನಿಂದ ನಿಂದನೆ: ಧರಣಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.