ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲಿಂಗ ತಾರತಮ್ಯದ ವಿರುದ್ಧ ಹೋರಾಡೋಣ: ಲಕ್ಷ್ಮಿ ಹೆಬ್ಬಾಳಕರ

Published 6 ಮಾರ್ಚ್ 2024, 7:52 IST
Last Updated 6 ಮಾರ್ಚ್ 2024, 7:52 IST
ಅಕ್ಷರ ಗಾತ್ರ

ಬೆಳಗಾವಿ: ‘ಬಾಲ್ಯವಿವಾಹ ಪದ್ಧತಿ ಮತ್ತು ಭ್ರೂಣಹತ್ಯೆ ಸಮಾಜಕ್ಕೆ ಕಂಟಕವಾಗಿವೆ. ಇವುಗಳ ನಿರ್ಮೂಲನೆಗೆ ಶ್ರಮಿಸೋಣ. ಲಿಂಗ ತಾರತಮ್ಯದ ವಿರುದ್ಧ ಹೋರಾಡೋಣ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ನಗರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕರ್ನಾಟಕ ಹೆಲ್ತ್ ಪ್ರಮೋಷನ್‌ ಟ್ರಸ್ಟ್‌ನವರು ಹಮ್ಮಿಕೊಂಡಿದ್ದ ‘ಸ್ಫೂರ್ತಿ’ ಹದಿಹರೆಯದ ಹೆಣ್ಣು ಮಕ್ಕಳೊಂದಿಗೆ ನೇರ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹೆಣ್ಣು ಸಂಸಾರದ ಕಣ್ಣು. ಈ ದೇಶಕ್ಕೆ ಅತಿಹೆಚ್ಚು ಒಲಿಂಪಿಕ್ಸ್‌ ಪದಕ ತಂದುಕೊಟ್ಟಿರುವುದು ಹೆಣ್ಣು ಮಕ್ಕಳೇ. ಹೆಚ್ಚಿನ ಐಎಎಸ್‌ ಅಧಿಕಾರಿಗಳೂ ಮಹಿಳೆಯರೇ ಇದ್ದಾರೆ. ಪ್ರತಿವರ್ಷ ಎಸ್ಸೆಸ್ಸೆಲ್ಸಿ ಮತ್ತು ಪಿಯು ದ್ವಿತೀಯ ವರ್ಷದ ಪರೀಕ್ಷೆಯಲ್ಲೂ ಬಾಲಕಿಯರೇ ಸಾಧನೆ ಮೆರೆಯುತ್ತ ಬಂದಿದ್ದಾರೆ’ ಎಂದು ಶ್ಲಾಘಿಸಿದರು.

ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ, ಟ್ರಸ್ಟ್‌ನ ನಿರ್ದೇಶಕಿ ಶೋಭಾ ಡಿ.ಕೆ., ಸತ್ಯನಾರಾಯಣ ಜಿ., ಅಶೋಕ ಕೋಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT