ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಳೆ ಹಾನಿ | ಸರ್ಕಾರಕ್ಕೆ ವರದಿ ನೀಡಿ: ಮಹಾಂತೇಶ ಕೌಜಲಗಿ

ತ್ರೈಮಾಸಿಕ ಸಭೆ: ಅಧಿಕಾರಿಗಳಿಗೆ ಶಾಸಕ ಕೌಜಲಗಿ ಸೂಚನೆ
Published 6 ಆಗಸ್ಟ್ 2024, 15:18 IST
Last Updated 6 ಆಗಸ್ಟ್ 2024, 15:18 IST
ಅಕ್ಷರ ಗಾತ್ರ

ಬೈಲಹೊಂಗಲ: ‘ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಂಬಂಧಪಟ್ಟ ಪಿಡಿಒ, ಗ್ರಾಮಲೆಕ್ಕಾಧಿಕಾರಿ ಮತ್ತು ನೋಡೆಲ್ ಅಧಿಕಾರಿಗಳು ತಕ್ಷಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು’ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾ ಭವನದಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಳೆಯಿಂದ ಹಾನಿಗೊಳಗಾದ ಸ್ಥಳಗಳ ಪರಿಶೀಲಿಸಿ ಬಿದ್ದ ಮನೆ, ಶಾಲೆ, ಅಂಗನವಾಡಿ, ಬೆಳೆ ಹಾನಿ,  ಕುರಿತು ಇದುವರೆಗೆ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ಎಷ್ಟು ವರದಿ ಕಳುಹಿಸಲಾಗಿದೆ. ಮಳೆ ಹಾನಿ ಕುರಿತು ನೋಡೆಲ್ ಅಧಿಕಾರಿಗಳು ಯಾರು, ಯಾವ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದೀರಿ ಎಂಬುವುದರ ಬಗ್ಗೆ ಮಾಹಿತಿ ಕೇಳಿದರು. ಈ ಕುರಿತು ಸರಿಯಾದ ಮಾಹಿತಿ ಒದಗಿಸದ ಅಧಿಕಾರಿಗಳನ್ನು  ತರಾಟೆಗೆ ತೆಗೆದುಕೊಂಡರು.

‘ಹದಿನೈದು ದಿನಗಳಲ್ಲಿ ವರದಿ ನೀಡಬೇಕು. ಶಾಲೆಯಲ್ಲಿ ಹಾನಿ ಆಗಿದ್ದರೆ ಬೇರೆ ಕಡೆ ಸ್ಥಳಾಂತರ ಮಾಡಬೇಕು. ಈ ಕುರಿತು ತಕ್ಷಣ ಮುಖ್ಯಶಿಕ್ಷಕರಿಗೆ ತಿಳಿಸಿ ಶಾಲೆಯ ತರಗತಿಗಳನ್ನು ಬೇರೆ ಕಡೆಗೆ ನಡೆಸಲು ತಿಳಿಸಬೇಕು. ಶಾಲೆ, ಅಂಗನವಾಡಿಗಳ ದುರಸ್ತಿಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು’ ಎಂದು ಸೂಚಿಸಿದರು.

‘ಸಂತ್ರಸ್ತರಿಗೆ ಸರ್ಕಾರದ ಸೌಲಭ್ಯ ಕಲ್ಪಿಸಿಕೊಡಬೇಕು. ಕಳೆದ ವರ್ಷ ಬಿದ್ದ ಮನೆಗಳನ್ನು ಈ ವರ್ಷ ಸೇರಿಸಿ ಅನುಕೂಲ ಮಾಡಿಕೊಡಿ. ದೊಡವಾಡದಲ್ಲಿ ದೇವಸ್ಥಾನದಲ್ಲಿ ವಾಸವಾದ ಸಂತ್ರಸ್ತರಿಗೆ ನೆರವಾಗಿ. ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಮಾಹಿತಿ ಪಡೆದ ಶಾಸಕರು ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಬೇಕು. ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದ್ದು, ನೀರನ್ನು ಎರಡು ಬಾರಿ ಪಿಲ್ಟರ್ ಮಾಡಬೇಕು. ಸಾಂಕ್ರಾಮಿಕ ಕಾಯಿಲೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು.

ಕೆಡಿಪಿ ಸಭೆಗೆ ಬರುವ ಮುಂಚೆ ತಮ್ಮ ಇಲಾಖೆ ಎಲ್ಲ ಮಾಹಿತಿ ಕುರಿತು ಪಟ್ಟಿ ಮಾಡಿಕೊಂಡು ಬರಬೇಕು. ವರದಿ ಇಲ್ಲವೆಂದರೇ ಏಕೆ ಕೆಲಸ ಮಾಡುತ್ತಿರಿ ಎಂದು ಅಧಿಕಾರಿಗಳ ನಡೆಗೆ ಕಿಡಿ ಕಾರಿದರು.

ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, 'ಮಳೆಯಿಂದ ಮನೆಗಳನ್ನು ಕಳೆದುಕೊಂಡು ಸರಕಾರದ ಸಹಾಯಧನ ಪಡೆಯದ ಅಸಹಾಯಕರನ್ನು ಗುರುತಿಸಿ ಸೂಕ್ತ ಪರಿಹಾರ ವಿತರಿಸಲು ಪ್ರಸ್ತಾವನೆ ಸಲ್ಲಿಸಬೇಕು. ಪರಿಹಾರ ವಿತರಿಸಲು ತಾರತಮ್ಯ ಮಾಡಬಾರದು.ಅಂಗನವಾಡಿ ಕೇಂದ್ರಗಳು ಮಳೆಯಿಂದ ಹಾನಿಗೊಳಗಾಗುವ ಲಕ್ಷಣ ಕಂಡು ಬಂದರೆ ಸಮುದಾಯ ಭವನ, ಶಾಲಾ ಕೊಠಡಿಗಳನ್ನು ಬಳಸಿಕೊಳ್ಳಬೇಕು’ ಎಂದರು.

ತಹಶೀಲ್ದಾರ ಹನುಮಂತ ಶೀರಹಟ್ಟಿ, ತಾ.ಪಂ.ಇಓ ಸುಭಾಸ ಸಂಪಗಾಂವಿ, ಕಿರಣ ಘೋರ್ಪಡೆ, ಡಾ.ಮಹಾಂತೇಶ ಕಳ್ಳಿಬಡ್ಡಿ ವೇದಿಕೆಯಲ್ಲಿದ್ದರು. ಈ ಸಂದರ್ಭದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಇದೇ ವೇಳೆ ನವೀಕರಣಗೊಂಡ ತಾಪಂ ಕಟ್ಟಡ, ಸಭಾ ಭವನ ಉದ್ಘಾಟಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್, ಜಾಕೇಟ್, ಗ್ರಾಮ ಪಂಚಾಯಿತಿ ಪಿಡಿಗಳಿಗೆ ಕಂಪ್ಯೂಟರ್, ಮೊಬೈಲ್ ವಿತರಿಸಲಾಯಿತು.

ಬೈಲಹೊಂಗಲ ತಾಲ್ಲೂಕು ಪಂಚಾಯಿತಿ ಸಭಾ ಭವನದಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿದರು. ಶಾಸಕ ಬಾಬಾಸಾಹೇಬ ಪಾಟೀಲ ತಹಶೀಲ್ದಾರ್ ಎಚ್‌.ಎನ್.ಶಿರಹಟ್ಟಿ ಇಒ ಸುಭಾಸ ಸಂಪಗಾಂವ ಹಾಜರಿದ್ದರು
ಬೈಲಹೊಂಗಲ ತಾಲ್ಲೂಕು ಪಂಚಾಯಿತಿ ಸಭಾ ಭವನದಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿದರು. ಶಾಸಕ ಬಾಬಾಸಾಹೇಬ ಪಾಟೀಲ ತಹಶೀಲ್ದಾರ್ ಎಚ್‌.ಎನ್.ಶಿರಹಟ್ಟಿ ಇಒ ಸುಭಾಸ ಸಂಪಗಾಂವ ಹಾಜರಿದ್ದರು

ಅಧಿಕಾರಿಗಳ ಅಪೂರ್ಣ ಮಾಹಿತಿ: ಶಾಸಕ ಗರಂ ನವೀಕರಣಗೊಂಡ ತಾಪಂ ಕಟ್ಟಡ ಉದ್ಘಾಟನೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್, ಜಾಕೇಟ್ ವಿತರಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT