ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ: ದ್ರಾಕ್ಷಿ ಬೆಳೆಗಾರರಿಗೆ ಹಾನಿ

Last Updated 5 ಏಪ್ರಿಲ್ 2022, 5:42 IST
ಅಕ್ಷರ ಗಾತ್ರ

ಬೆಳಗಾವಿ: ನಗರದಲ್ಲಿ ಸೋಮವಾರ ಅರ್ಧ ಗಂಟೆಗೂ ಹೆಚ್ಚು ಸಮಯ ಗುಡುಗು– ಸಿಡಿಲು ಸಹಿತ ಜೋರು ಮಳೆಯಾಗಿದೆ. ಜೋರು ಗಾಳಿಯಿಂದಾಗಿ ಅಲ್ಲಲ್ಲಿ ಮರ ಹಾಗೂ ವಿದ್ಯುತ್‌ ಕಂಬಗಳು ಬಿದ್ದಿವೆ. ತಾಲ್ಲೂಕಿನ ಪಂತಬಾಳೇಕುಂದ್ರಿ ಗ್ರಾಮದಲ್ಲಿ ಕೆಲವು ಮನೆಗಳ ತಗಡಿನ ಶೀಟುಗಳು ಹಾರಿಹೋಗಿವೆ.

ಅಥಣಿ ತಾಲ್ಲೂಕಿನ ಪೂರ್ವ ಭಾಗದಲ್ಲಿ ಭಾನುವಾರ ಸಂಜೆ ಸುರಿದ ಅಕಾಲಿಕ ಮಳೆ, ಬಿರುಗಾಳಿಯಿಂದ ದ್ರಾಕ್ಷಿ ಬೆಳೆಗಾರರಿಗೆ ಲಕ್ಷಾಂತರ ರೂಪಾಯಿ ಹಾನಿಯಾಗಿದೆ. ಐಗಳಿಯ ಕಲ್ಯಾಣ ನಗರದಲ್ಲಿರುವ ಒಣ ದ್ರಾಕ್ಷಿ ಸಂಸ್ಕರಣಾ ಘಟಕದ ಬಳಿ ಅಡಹಳ್ಳಿ, ಕೋಹಳ್ಳಿ, ಕಕಮರಿ, ಅಡಹಳಟ್ಟಿ, ಸುಟಟ್ಟಿ, ಕೊಕಟನೂರ, ಯಲಹಡಗಿ ಮೊದಲಾದ ಗ್ರಾಮಗಳ ಬೆಳೆಗಾರರು ದ್ರಾಕ್ಷಿಯನ್ನು ಒಣಗಲು ಹಾಕಿದ್ದರು. ಏಕಾಏಕಿ ಸುರಿದ ಮಳೆಯಿಂದಾಗಿ ಅಂದಾಜು 50 ಟನ್ ದ್ರಾಕ್ಷಿ ನೀರು ಪಾಲಾಗಿದೆ.

‘ಬೆಳೆಗಾರರು ಅಪಾರ ಹಾನಿ ಅನುಭವಿಸಿದ್ದಾರೆ. ಸರ್ಕಾರ ಮತ್ತು ವಿಮಾ ಕಂಪನಿಯವರು ಪರಿಹಾರ ಕೊಡಲು ಕೂಡಲೇ ಮುಂದಾಗಬೇಕು’ ಎಂದು ಒಣ ದ್ರಾಕ್ಷಿ ಸಂಸ್ಕರಣಾ ಘಟಕದ ಅಧ್ಯಕ್ಷ ಶಹಜಹಾನ್‌ ಡೊಂಗರಗಾಂವ ಅವರು ಒತ್ತಾಯಿಸಿದರು.

ರಭಸದ ಗಾಳಿ–ಮಳೆ (ಬಸವನಬಾಗೇವಾಡಿ ವರದಿ): ಪಟ್ಟಣ ಸೇರಿದಂತೆ ವಿವಿಧೆಡೆ ಗುಡುಗು, ಮಿಂಚು, ರಭಸದ ಸಹಿತ ಗಾಳಿಯೊಂದಿಗೆ ಮಳೆಯಾಗಿದೆ.

ರಭಸದ ಗಾಳಿಗೆ ಕೆಲ ತೋಟಗಳು ಹಾಗೂ ಮನೆ, ಕಟ್ಟಡಗಳ ನಿರ್ಮಾಣಕ್ಕಾಗಿ ಹಾಕಲಾಗಿದ್ದ ಪತ್ರಾಸ್ ಗಳು ಹಾರಿ ಹೋಗಿವೆ. ವಿವಿಧೆಡೆ ಮರಗಳ ಟೊಂಗೆಗಳು ಮುರಿದು ಬಿದ್ದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT