ಗುರುವಾರ , ಜನವರಿ 23, 2020
28 °C

ಕಲ್ಲು ತೂರಾಟ ಪ್ರಕರಣ: ಮತ್ತೊಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ನಗರದಲ್ಲಿ ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ನಡೆದ ಪ್ರತಿಭಟನಾ ಮೆರವಣಿಗೆ ಬಳಿಕ, ಶಿವಾಜಿನಗರದ ಆರ್‌ಟಿಒ ವೃತ್ತದ ಬಳಿ ವಾಹನಗಳ ಮೇಲೆ ಮಂಗಳವಾರ ನಡೆದಿದ್ದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಕೆಟ್‌ ಠಾಣೆ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಭಾನುವಾರ ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ 4ಕ್ಕೆ ಏರಿದೆ.

ಆಜಾದ್‌ ನಗರದ ಆಟೊರಿಕ್ಷಾ ಚಾಲಕ ವಾಸಿಂ ಅಹಮದ್ ಮುಲ್ಲಾ ಬಂಧಿತ ಆರೋಪಿ. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸಿಪಿ ಎನ್.ವಿ. ಬರಮನಿ ತಿಳಿಸಿದ್ದಾರೆ.

ಆಜಾದ್ ನಗರದ ಝುಲ್ಫಿಕರ್‌ ಮೊಹಮ್ಮದ್ ಹವತ್ ಹಕೀಂ, ನ್ಯೂ ಗಾಂಧಿನಗರದ ವಾಸಿಂ ಅಹಮದ್ ಮೊಕಾಶಿ ಹಾಗೂ ಉಜ್ವಲ ನಗರ ನಿವಾಸಿ ಮೊಹಮ್ಮದ್ ತಾಹಿರ್ ಅಮಾನುಲ್ಲಾ ದೇವಲಾಪುರ ಎನ್ನುವವರನ್ನು ಬುಧವಾರ ಬಂಧಿಸಲಾಗಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು