ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಸ್ಥಾಯಿ ಸಮಿತಿಗಳಿಗೆ ಅವಿರೋಧ ಆಯ್ಕೆ

Last Updated 16 ಅಕ್ಟೋಬರ್ 2020, 13:17 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ಇಲ್ಲಿನ ಜಿಲ್ಲಾ ಪಂಚಾಯಿತಿಯ ಐದು ವಿವಿಧ ಸ್ಥಾಯಿ ಸಮಿತಿಗಳಿಗೆ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಶುಕ್ರವಾರ ಚುನಾವಣಾ ಪ್ರಕ್ರಿಯೆ ನಡೆಯಿತು. ಸಾಮಾನ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಅರುಣ ಕಟಾಂಬಳೆ, ಸದಸ್ಯರಾಗಿ ಮಹಾಂತೇಶ ಮಲ್ಲಪ್ಪ ಮಗದುಮ್ಮ, ಸರಸ್ವತಿ ರಾಮಚಂದ್ರ ಪಾಟೀಲ, ಸಿದ್ದು ನಾಗಪ್ಪ ನರಾಟೆ, ಸುದರ್ಶನ ಅಣ್ಣಸಾಹೇಬ ಖೋತ, ಸುಜಾತಾ ಸೂರ್ಯಕಾಂತ ಚೌಗುಲೆ, ಕಸ್ತೂರಿ ಬಸವಂತ ಕಮತಿ.

ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸಿದ್ದಪ್ಪ ಮದುಕಣ್ಣವರ, ಸದಸ್ಯರಾಗಿ ಸುರೇಖಾ ನಾಯಕ, ಲಕ್ಷ್ಮಿ ನಿಂಗಪ್ಪ ಕುರುಬರ, ಬಸವರಾಜ ದೇಮಪ್ಪ ಬಂಡಿವಡ್ಡರ, ಮಲ್ಲಪ್ಪ ಸಿದ್ದಪ್ಪ ಹಿರೇಕುಂಬಿ, ಪವಾರ ರಾಜೇಂದ್ರ ರಾಮಪ್ಪ, ಶಶಿಕಲಾ ರಾಜೇಂದ್ರ ಸಣ್ಣಕ್ಕಿ.

ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ನಿಂಗಪ್ಪ ರಾಮಪ್ಪ ಪಕಾಂಡಿ ಅಧ್ಯಕ್ಷರಾಗಿ ಸದಸ್ಯರಾಗಿ ಮಾಧುರಿ ಶಿಂಧೆ, ಅಜಿತ ದೇಸಾಯಿ, ಸುಮನ್ ಮಳಿವಾಡಪ್ಪ ಪಾಟೀಲ, ಲಾವಣ್ಯ ಶಾಮಸುಂದರ ಶಿಲೇದಾರ, ಮೀನಾಕ್ಷಿ ಸುದೀರ ಜೋಡಟ್ಟಿ, ನಿಂಗಪ್ಪ ಅರಕೇರಿ.

ಹಣಕಾಸು ಲೆಕ್ಕಪರಿಶೋಧನೆ ಮತ್ತು ಯೋಜನಾ ಸ್ಥಾಯಿ ಸಮಿತಿ ಸದಸ್ಯರಾಗಿ ಜಿತೇಂದ್ರ ಮಾದರ, ಗುರಪ್ಪ ದಾಸ್ಯಾಳ, ಕೃಷ್ಣಪ್ಪ ಲಮಾಣಿ, ರಮೇಶ ದೇಶಪಾಂಡೆ, ಅನಿಲ್ ಮ್ಯಾಕಲಮರಡಿ, ಶಿವಗಂಗಾ ಗೊರವನಕೊಳ್ಳ. (ಇದಕ್ಕೆ ಜಿಲ್ಲಾ ‍ಪಂಚಾಯಿತಿ ಅಧ್ಯಕ್ಷರೇ ಅಧ್ಯಕ್ಷರಾಗಿರುತ್ತಾರೆ.

ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾಗಿ ಫಕೀರಪ್ಪ ಹದ್ದನ್ನವರ, ಸದಸ್ಯರಾಗಿ ಸಿದ್ದಗೌಡ ಸುಣಗಾರ, ಬೆಳವಡಿ ಶಿವಕ್ಕ ದೇವಪ್ಪ, ಸುರೇಶ ಫಕೀರಪ್ಪ ಮ್ಯಾಗೇರಿ, ಭಾರತಿ ಬುಟಾಳೆ, ಶಂಕರ ಮಾಡಲಗಿ, ಗೋವಿಂದ ಕೊಪ್ಪದ ಆಯ್ಕೆಯಾದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ಐಹೊಳೆ, ವಿಧಾನಪರಿಷತ್ ಸದಸ್ಯ ಪ್ರೊ.ಸಾಬಣ್ಣ ತಳವಾರ ಉಪಸ್ಥಿತರಿದ್ದರು.

ಜಿಲ್ಲಾ ‍ಪಂಚಾಯಿತಿ ಉಪ ಕಾರ್ಯದರ್ಶಿ ಎಸ್.ಬಿ. ಮುಳ್ಳಳ್ಳಿ ಅವರು ನೂತನವಾಗಿ ಆಯ್ಕೆಯಾದ ಸ್ಥಾಯಿ ಸಮಿತಿ ಸದಸ್ಯರ ಹೆಸರನ್ನು ಘೋಷಣೆ ಮಾಡಿದರು. ಮೊದಲು ಸದಸ್ಯರು ಬಳಿಕ ಅಧ್ಯಕ್ಷರ ಆಯ್ಕೆ ನಡೆಯಿತು.

ಕೊರೊನಾ ಕಾರಣದಿಂದಾಗಿ ಈ ಚುನಾವಣೆ ಮುಂದೂಡಿಕೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT