ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮವಾಗಿ ಮತ ಎಣಿಕೆ ಕೇಂದ್ರಕ್ಕೆ ನುಗ್ಗಿದ ಬಿಜೆಪಿ ಅಭ್ಯರ್ಥಿಯ ಏಜೆಂಟ್

ತರಾಟೆಗೆ ತೆಗೆದುಕೊಂಡು ಹೊರಹಾಕಿದ ಡಿ.ಸಿ
Last Updated 15 ಜೂನ್ 2022, 6:48 IST
ಅಕ್ಷರ ಗಾತ್ರ

ಬೆಳಗಾವಿ: ಏಜೆಂಜರ ಗುರುತಿನ ಚೀಟಿ ಇಲ್ಲದೇ ಮತ ಎಣಿಕೆ ಕೇಂದ್ರದ ಒಳಗೆ ನುಗ್ಗಿದ ವಾಯವ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಣಮಂತ ನಿರಾಣಿ ಅವರ ಏಜೆಂಟ್ ಒಬ್ಬರನ್ನು ಸಹಾಯಕ ಚುನಾವಣಾಧಿಕಾರಿ ನಿತೇಶ್ ಪಾಟೀಲ ಅವರು ತೀವ್ರ ತರಾಟೆಗೆ ತೆಗೆದುಕೊಂಡರು.

ಅಭ್ಯರ್ಥಿಯ ಪರವಾಗಿ ಸುರೇಶ ಎನ್ನುವ ಏಜೆಂಟ್ ಅಕ್ರಮವಾಗಿ ಒಳಗೆ ಬಂದಿದ್ದರು. ಇದನ್ನು ಗಮನಿಸಿದ ಜೆಡಿಎಸ್ ಪಕ್ಷದ ಏಜೆಂಟರು ಆಕ್ರೋಶ ವ್ಯಕ್ತಪಡಿಸಿದರು. ಚುನಾವಣಾಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರಿಗೆ ದೂರು ನೀಡಿದರು. ಈ ವೇಳೆ ಸ್ಥಳಕ್ಕೆ ಧಾವಿಸಿದ ಜಿಲ್ಲಾಧಿಕಾರಿಯೂ ಆದ ನಿತೇಶ್ ಅವರು, ಅವರ ಬಳಿ ಪಾಸ್ ವಿಚಾರಿಸಿದರು.

ಸುರೇಶ ಬಳಿ ಪಾಸ್ ಇಲ್ಲದ ಕಾರಣ ಏರುದನಿಯಲ್ಲಿ ತರಾಟೆಗೆ ತೆಗೆದುಕೊಂಡರು.

'ಮತ ಎಣಿಕೆ ಕೇಂದ್ರದ ಒಳಗೆ ಬರಲು ನಿಯಮಗಳಿವೆ. ಅದಕ್ಕಾಗಿ ಪ್ರತ್ಯೇಕ ಪಾಸ್ ನೀಡಲಾಗಿದೆ. ಐ.ಡಿ ಇಲ್ಲದೇ ನೀವು ಹೇಗೆ ಒಳಗೆ ಬಂದಿರಿ? ಈ ಕ್ಷಣಕ್ಕೆ ಹೊರಗೆ ನಡೆಯಿರಿ' ಎಂದು ಹೊರಹಾಕಿದರು.

ಈ ವೇಳೆ ಸ್ಥಳದಲ್ಲಿದ್ದ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಚುನಾವಣೆಯ ಸಿಬ್ಬಂದಿ ಹಾಗೂ ಭದ್ರತೆಗೆ ನಿಂತಿದ್ದ ಪೊಲೀಸ್ ಸಿಬ್ಬಂದಿಯನ್ನೂ ತರಾಟೆಗೆ ತೆಗೆದುಕೊಂಡರು.

ಪೊಲೀಸ್ ಕಾನ್ ಸ್ಟೆಬಲ್ ಅಸ್ವಸ್ಥ

ಬೆಳಗಾವಿ ಜ್ಯೋತಿ ಕಾಲೇಜಿನ ಮತ ಎಣಿಕೆ ಕೇಂದ್ರದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಪೊಲೀಸ್ ಕಾನ್ ಸ್ಟೆಬಲ್ ಬುಧವಾರ ಬೆಳಿಗ್ಗೆ ಅಸ್ವಸ್ಥಗೊಂಡರು.

ಪಿ.ಜಿ.ಕಾಪಶೆ ಅಸ್ವಸ್ಥರಾಗಿದ್ದು,ಪ್ರಜ್ಞೆ ತಪ್ಪಿ ಬಿದ್ದರು. ಅವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT