ಶುಕ್ರವಾರ, ಡಿಸೆಂಬರ್ 4, 2020
24 °C

ಬಿಜೆಪಿ ‘ವಾರ್‌ ರೂಂ’ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇಲ್ಲಿನ ಬಿಜೆಪಿ ಮಹಾನಗರ ಜಿಲ್ಲಾ ಘಟಕದ ಕಾರ್ಯಾಲಯದಲ್ಲಿ ಸಾಮಾಜಿಕ ಜಾಲತಾಣ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ವತಿಯಿಂದ ವಾರ್‌ ರೂಂ ಉದ್ಘಾಟನೆ ಮಾಡಲಾಯಿತು.

ಪಕ್ಷದ ರಾಜ್ಯ ಘಟಕದ ವಕ್ತಾರ ಎಂ.ಬಿ. ಝಿರಲಿ, ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಶಶಿಕಾಂತ ಆರ್. ಪಾಟೀಲ, ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ, ಮುಖಂಡ ರಾಜೇಂದ್ರ ಹರಕುಣಿ, ಮಹಾನಗರ ಜಿಲ್ಲಾ ಪ್ರಭಾರಿ ರಮೇಶ ದೇಶಪಾಂಡೆ ಹಾಗೂ ಒಳಚರಂಡಿ ನಿಗಮದ ನಿರ್ದೇಶಕಿ ದೀಪಾ ಕುಡಚಿ ಉದ್ಘಾಟಿಸಿದರು. ಸಾಮಾಜಿಕ ಜಾಲತಾಣದ ಜಿಲ್ಲಾ ಪ್ರಮುಖ ಕೇದಾರ ಜೋರಾಪೂರ, ಸಹಪ್ರಮುಖ ಶ್ರೇಯಸ್ ನಾಕಾಡಿ ಪಾಲ್ಗೊಂಡಿದ್ದರು.

ರಾಜ್ಯ ಎಸ್‌ಸಿ ಮೋರ್ಚಾ ಕಾರ್ಯದರ್ಶಿ ರಾವ್ ಬಹದ್ದೂರ್ ಕದಮ ಹಾಗೂ ಮಹಾನಗರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದಾದಾಗೌಡ ಬಿರಾದಾರ, ಮುರುಘೇಂದ್ರ ಪಾಟೀಲ ಹಾಗೂ ಗಿರೀಶ ಧೂಂಗಡಿ, ಉತ್ತರ ಮಂಡಲದ ಅಧ್ಯಕ್ಷ ಪಾಂಡುರಂಗ ದಾಮಣೇಕರ ಮತ್ತು ಮಹಾನಗರ ಮಾಧ್ಯಮ ಪ್ರಮುಖ ಶರತ್ ಪಾಟೀಲ, ಮಹಾನಗರ ಜಿಲ್ಲಾ ವಕ್ತಾರ ಹನುಮಂತ ಅ. ಕೂಂಗಾಲಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು