ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಲಕರ ಜಗಳ: ಪಾಲಕರಿಂದ ಬಾಲಕನಿಗೆ ಥಳಿತ 

Published 20 ಜೂನ್ 2024, 15:12 IST
Last Updated 20 ಜೂನ್ 2024, 15:12 IST
ಅಕ್ಷರ ಗಾತ್ರ

ನಿಪ್ಪಾಣಿ: ಎರಡು ಮಕ್ಕಳ ಜಗಳದಲ್ಲಿ ಪಾಲಕರೊಬ್ಬರು ಮಧ್ಯ ಪ್ರವೇಶಿಸಿ ಬಾಲಕನನ್ನು ಹಿಗ್ಗಾಮುಗ್ಗಾ ಥಳಿಸಿದ ಅಮಾನವೀಯತೆ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಜೂನ್‌ 6ರಂದು ಮಕ್ಕಳಿಬ್ಬರು ಸ್ಥಳೀಯ ತಹಶೀಲ್ದಾರ್ ಪ್ಲಾಟ್‍ನಲ್ಲಿ ಜಗಳವಾಡುತ್ತಿದ್ದರು. ತನ್ನ ಮಗನ ಜೊತೆಗೆ ಜಗಳವಾಡುತ್ತಿದ್ದ 12 ವರ್ಷದ ಬಾಲಕನನ್ನು ಮತ್ತೊಬ್ಬ ಬಾಲಕನ ತಂದೆ ಸ್ಥಳೀಯ ತಹಶೀಲ್ದಾರ ಪ್ಲಾಟ್‍ನ ಇಸ್ಮಾಯಿಲ್ ಗಫರ್ ಮುಲ್ಲಾ(42) ಥಳಿಸಿದ್ದಾರೆ. ಈ ಘಟನೆ ಮಸೀದಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಘಟನೆಯನ್ನು ನಗರದ ಸಮಾಜ ಮುಖಂಡರು ಒಗ್ಗೂಡಿ ಪರಿಹರಿಸಿದ್ದರು. ಸ್ಥಳೀಯ ಶಹರ್ ಪೊಲೀಸ್ ಠಾಣೆಯ ಪಿಎಸ್‍ಐ ಸ್ವಯಂಪ್ರೇರಿತವಾಗಿ ಜೂನ್‌ 10ರಂದು ದೂರು ದಾಖಲಿಸಿದ್ದರು. ನಂತರ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹರಿದಾಡುತ್ತಿದ್ದಂತೆ ಥಳಿಸಿಕೊಂಡ ಬಾಲಕನ ಪಾಲಕರು ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT