ಬೈಲಹೊಂಗಲ: 'ಗೌರಿಗಣೇಶ ಹಬ್ಬವನ್ನು ಸಾರ್ವಜನಿಕರು ಶಾಂತಿ ಹಾಗೂ ಸೌಹಾರ್ದಯುತವಾಗಿ ಆಚರಿಸಬೇಕು. ಗಜಾನನ ಯುವಕ ಮಂಡಳಿಗ ಹಿರಿಯರು, ಮುಖಂಡರು ಯಾವುದೇ ಅಹಿತಕರ ಘಟನೆಗಳು ಆಗದಂತೆ ಮುಂಜಾಗೃತಿವಹಿಸಬೇಕು' ಎಂದು ತಹಶೀಲ್ದಾರ್ ಎಚ್.ಎನ್.ಶಿರಹಟ್ಟಿ ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾ ಭವನದಲ್ಲಿ ಗಣೇಶ ಹಬ್ಬ ಆಚರಣೆ ಅಂಗವಾಗಿ ಮಂಗಳವಾರ ಬೈಲಹೊಂಗಲ ಹಾಗೂ ನೇಸರಗಿ ಪೊಲೀಸ್ ಠಾಣೆ ವ್ಯಾಪ್ತಿಯ ಗಣೇಶ ಉತ್ಸವ ಮಂಡಳಿಗಳಿಗೆ ಮಂಗಳವಾರ ನಡೆದ ಶಾಂತಿಪಾಲನೆ ಸಭೆ ನೇತೃತ್ವ ವಹಿಸಿ ಮಾತನಾಡಿದರು.

ಡಿವೈಎಸ್ಪಿ ರವಿ ನಾಯಕ ಮಾತನಾಡಿ, 'ಸಾರ್ವಜನಿಕ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸುವ ಮಂಡಳಿಗಳು ಪೊಲೀಸ್ ಇಲಾಖೆ ನೀಡುವ ಸಲಹೆ-ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮಂಡಳಿಯವರು ಗಣೇಶ ಮಂಟಪದಲ್ಲಿ ಕಡ್ಡಾಯವಾಗಿ ಸಿಸಿಟಿವ್ಹಿ ಅಳವಡಿಸಬೇಕು. ಹೆಸ್ಕಾಂ ಇಲಾಖೆಯಿಂದ ಅನುಮತಿ ಪಡೆದು ಮೀಟರ ಆಳವಡಿಸಬೇಕು ಎಂದು ತಿಳಿಸಿದರು.

ಯಾವುದೇ ಅವಘಡ ಸಂಭವಿಸಿದಂತೆ ಗುಣಮಟ್ಟದ ವಿದ್ಯುತ್ ವೈರ್ ಗಳನ್ನು ಬಳಕೆ ಮಾಡಬೇಕು. ಮಂಟಪದ ಸುತ್ತಮುತ್ತಲೂ ಬೆಳಕಿನ ವ್ಯವಸ್ಥೆ ಕಲ್ಪಿಸಬೆಕು. ಅಲ್ಲದೇ ಇಬ್ಬರು ವ್ಯಕ್ತಿಗಳು ಮಂಟಪದಲ್ಲಿ ಇರಬೇಕು. ನಿಗದಿ ಪಡಿಸಿದ ಧ್ವನಿವರ್ಧಕ ಬಳಕೆ ಮಾಡಿಕೊಳ್ಳಬೇಕು. ಕರ್ಕಶ ಶಬ್ದ ನಿಷೇಧಿಸಲಾಗಿದೆ. ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆ ನಡೆಸಿದರೆ ಅಂತಹವರ ಮೇಲೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ' ಅವರು ಎಚ್ಚರಿಸಿದರು.

ಸಿಪಿಐಗಳಾದ ಪಂಚಾಕ್ಷರಿ ಸಾಲಿಮಠ, ರಾಘವೇಂದ್ರ ಹವಾಲ್ದಾರ, ವಿಶ್ವಹಿಂದು ಪರಿಷತ್ ಜಿಲ್ಲಾ ಘಟಕ ಅಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ ಮಾತನಾಡಿದರು.

ವಿವಿಧ ಇಲಾಖೆಯ ಅಧಿಕಾರಿಗಳಾದ ರಘು ಬಿ.ಎನ್., ಆಚಾರ್ಯ, ಎಂ.ಐ.ಕುಟ್ರಿ ಇದ್ದರು.

ವಿಜಯ ಪೂಜೇರಿ, ಸಂಜೀವಕುಮಾರ ಮುರಗೋಡ, ಪುಂಡಲೀಕ ಸಾಣಿಕೊಪ್ಪ, ಆನಂದ ಹೊಂಗಲ ಸೇರಿದಂತೆ ವಿವಿಧ ಗಣೇಶ ಮಂಡಳಿಗಳ ಮುಖಂಡರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.