ಬೆಳಗಾವಿ: ‘ಹುಕ್ಕೇರಿ ತಾಲ್ಲೂಕಿನ ಇಂಗಳಿಯಲ್ಲಿ ಶ್ರೀರಾಮ ಸೇನೆಯ ಐವರು ಕಾರ್ಯಕರ್ತನ್ನು ಮರಕ್ಕೆ ಕಟ್ಟಿ ಥಳಿಸಿದ ಎಲ್ಲ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು. ಇಲ್ಲದಿದ್ದರೆ ಜುಲೈ 3ರಂದು ‘ಚಲೋ ಇಂಗಳಿ’ ಹೋರಾಟ ಕೈಗೊಳ್ಳುತ್ತೇವೆ’ ಎಂದು ಶ್ರೀರಾಮ ಸೇನೆ ರಾಜ್ಯ ಘಟಕದ ಅಧ್ಯಕ್ಷ ಗಂಗಾಧರ ಕುಲಕರ್ಣಿ ಹೇಳಿದರು.

ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಲೋ ಇಂಗಳಿ ಹೋರಾಟ ಎಲ್ಲಿಂದ ಆರಂಭಿಸಬೇಕು ಎಂದು ಚರ್ಚಿಸಿ ತೀರ್ಮಾನಿಸುತ್ತೇವೆ. ವಿವಿಧ ಮಠಾಧೀಶರು, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮತ್ತಿತರ ನಾಯಕರು ಪಾಲ್ಗೊಳ್ಳುವರು’ ಎಂದರು.

‘ಇಂಗಳಿಯಲ್ಲಿನ ಅಮಾನವೀಯ ಘಟನೆ ಬಗ್ಗೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಅವರು ಮಾತನಾಡುವುದನ್ನು ಗಮನಿಸಿದರೆ, ಅವರೊಬ್ಬ ಅಧಿಕಾರಿಯೋ, ರಾಜಕೀಯ ವ್ಯಕ್ತಿಯೋ ಅಥವಾ ಹಲ್ಲೆ ಮಾಡಿದವರ ಪರವಾಗಿ ಇರುವವರೋ ಎಂಬುದು ಗೊತ್ತಾಗುತ್ತಿಲ್ಲ’ ಎಂದು ದೂರಿದರು.

‘ನಮ್ಮ ಸಂಘಟನೆಯ ಕಾರ್ಯಕರ್ತನಿಗೆ ರೌಡಿಶೀಟರ್ ಎನ್ನುವ ಗುಳೇದ ಅವರು, ಬೇರೆ ಬೇರೆ ಪ್ರಕರಣಗಳಲ್ಲಿ ಯಾವ ರೀತಿಯಲ್ಲಿ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡಿದ್ದಾರೆ ಎಂಬುದು ಗೊತ್ತಿದೆ’ ಎಂದು ಹೇಳಿದರು.

ಮುಖಂಡರಾದ ವಿಠ್ಠಲ ಗಡ್ಡಿ, ವಿನಯ ಅಂಗ್ರೊಳ್ಳಿ, ರವಿಕುಮಾರ ಕೋಕಿತಕರ ಇದ್ದರು.

‘ಹೊರಗಿನವರು ನಮ್ಮೂರಿಗೆ ಬರುವ ಅಗತ್ಯವಿಲ್ಲ’

ಇಂಗಳಿಯ ಲಕ್ಷ್ಮೀದೇವರ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಎಲ್ಲ ಸಮುದಾಯಗಳ ಹಿರಿಯರು ಸಭೆ ನಡೆಸಿದರು.

‘ನಮ್ಮೂರಿನಲ್ಲಿ ಹಿಂದೂ– ಮುಸ್ಲಿಮರು ಒಗ್ಗಟ್ಟಿನಿಂದ ಇದ್ದೇವೆ. ನಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಗ್ರಾಮದಲ್ಲಿ ಹಿರಿಯರಿದ್ದಾರೆ. ಹಾಗಾಗಿ ಹೊರಗಿನವರು ನಮ್ಮೂರಿಗೆ ಬರುವ ಅವಶ್ಯಕತೆ ಇಲ್ಲ’ ಎಂದು ಹೇಳಿದರು.

‘ನಮ್ಮ ಸಂಘಟನೆ ಕಾರ್ಯಕರ್ತರನ್ನು ಹೊಡೆಯುವಾಗ ಗ್ರಾಮದ ಮುಖಂಡರು ಎಲ್ಲಿದ್ದರು? ಹೊರಗಿನವರು ನಮ್ಮೂರಿಗೆ ಬರಬೇಡಿ ಎನ್ನಲು ಇವರ್ಯಾರು’ ಎಂದು ಗಂಗಾಧರ ಕುಲಕರ್ಣಿ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
.ಇಂಗಳಿ ಘಟನೆ ಕೋಮು ಸಂಘರ್ಷವಲ್ಲ: ಎಸ್ಪಿ ಡಾ.ಭೀಮಾಶಂಕರ ಗುಳೇದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.