ಅಥಣಿ: ಪಟ್ಟಣದ ವೀರ ರಾಣಿ ಚನ್ನಮ್ಮ ಪುತ್ಥಳಿ ನಿರ್ಮಾಣದ ಫಲಕವನ್ನು ತೆರವುಗೊಳಿಸಿದ ಸ್ಥಳದಲ್ಲೇ ಶನಿವಾರ ಬೆಳಿಗ್ಗೆ ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ಲಿಂಗಾಯತ ಪಂಚಮಸಾಲಿ ಸಮಾಜದ ಮುಖಂಡರು ಸೇರಿ ಮರು ಸ್ಥಾಪನೆ ಮಾಡಿ ಪೂಜೆ ಸಲ್ಲಿಸಿದರು .

ಈ ವೇಳೆ ಮಾಜಿ ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ, ಇಲ್ಲಿರುವ ವೀರ ರಾಣಿ ಚನ್ನಮ್ಮ ಪುತ್ಥಳಿ ನಿರ್ಮಾಣ ಫಲಕವನ್ನು ಯಾರು ತೆಗೆದು ಹಾಕಿದರು ಎನ್ನುವದು ಈವರೆಗೂ ತಿಳಿದಿಲ್ಲ, ಇನ್ನೂ ಮುಂದೆ ಈ ತರಹ ಘಟನೆಗಳು ಆದಲ್ಲಿ ಉಗ್ರ ಹೋರಾಟ ಮಾಡಲಾಗುವುದು. ಇದೇ ಸ್ಥಳದಲ್ಲಿ ₹ 50 ಲಕ್ಷ ವೆಚ್ಚದಲ್ಲಿ ದೊಡ್ಡ ಮೂರ್ತಿ ಹಾಗೂ ಉದ್ಯಾನವನ್ನು ಸ್ಥಾಪನೆ ಮಾಡಬೇಕು ಇಲ್ಲವಾದಲ್ಲಿ ನಾವು ಪಕ್ಷಾತೀತವಾಗಿ ಹಾಗೂ ಜಾತ್ಯಾತೀತವಾಗಿ ಇಲ್ಲಿ ಪುತ್ಥಳಿ ನಿರ್ಮಾಣ ಮಾಡೆ ಮಾಡುತ್ತೇವೆ ಎಂದರು .

ಈ ವೇಳೆ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ, ಕನ್ನಡ ಪರ ಹೋರಾಟಗಾರ ಬಸನಗೌಡ ಪಾಟೀಲ (ಬಮ್ಮನಾಳ), ಶಿವರುದ್ರ ಘೂಳಪ್ಪನ್ನವರ,ಮಿತೇಶ ಪಟ್ಟಣ,ಪ್ರಮೋದ ಬೀಳ್ಳೂರ, ಆಕಾಶ ನಂದಗಾವ ಮಾತನಾಡಿದರು.

ಈ ವೇಳೆ ಮುಖಂಡರಾದ ಪುರಸಭೆ ಸದಸ್ಯರಾದ ರಾಜಶೇಖರ ಗುಡೋಡಗಿ, ಮಲ್ಲೇಶ ಹುದ್ದಾರ, ರಾಮನಗೌಡಾ ಪಾಟೀಲ, ಬಸವರಾಜ ಪಾಟೀಲ, ಮುಖಂಡರಾದ ಧರೇಪ್ಪಾ ಠಕ್ಕಣ್ಣವರ, ಗಿರೀಶ ಬುಟಾಳಿ, ಸಂಪತ್ತಕುಮಾರ ಶೇಟ್ಟಿ,ನಾನಾಸಾಬ ಅವತಾಡೆ ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.