ಚಿಕ್ಕೋಡಿ: ಜಮೀನುದಾರರ ಮನೆತನಕ್ಕೆ ಸೇರಿದ ಕುಟುಂಬವೊಂದು ಕಳೆದ 63 ವರ್ಷಗಳ ಕಾಲ ನಿರಂತರ ಹೋರಾಟ ಮಾಡಿ ತನ್ನ ಪಾಲಿನ ಜಮೀನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು ಹೆಮ್ಮೆಯ ಸಂಗತಿ ಎಂದು ಚಿಕ್ಕೋಡಿ ಪಟ್ಟಣದ ಹಿರಿಯ ವಕೀಲ ಎಸ್. ಡಿ. ಚೌಗಲಾ ಹೇಳಿದರು.

ಪಟ್ಟಣದಲ್ಲಿ ನಣದಿ ಸರ್ಕಾರ ಎಂಬ ಜಮೀನುದಾರರ ಕುಟುಂಬದ ಸದಸ್ಯರನ್ನು ಬುಧವಾರ ಸನ್ಮಾನಿಸಿ ಮಾತನಾಡುತ್ತಾ ‘ಕಳೆದ 6 ದಶಕಗಳಿಂದ ಚಿಕ್ಕೋಡಿ ನ್ಯಾಯಾಲಯದಿಂದ ದೆಹಲಿ ಸುಪ್ರೀಂಕೋರ್ಟವರೆಗೂ ಹೋರಾಟ ಮಾಡಿ ನ್ಯಾಯ ಪಡೆದುಕೊಳ್ಳುವಲ್ಲಿ ಕುಟುಂಬ ಯಶಸ್ವಿಯಾಗಿದೆ. ನಿರಂತರ ಹೋರಾಟ ಮಾಡಿದಲ್ಲಿ ಕೊನೆಗೆ ಜಯ ಲಭಿಸುತ್ತದೆ ಎಂಬುದಕ್ಕೆ ಈ ಕುಟುಂಬವೇ ನಿದರ್ಶನ’ ಎಂದು ಹೇಳಿದರು.

ಸನ್ಮಾನವನ್ನು ಸ್ವೀಕರಿಸಿದ ದಿಲೀಪ ದೇಶಮುಖ ಮಾತನಾಡಿ, 14 ಸಾವಿರ ಎಕರೆ ಜಮೀನು ಇದ್ದರೂ ತಮ್ಮ ಕುಟುಂಬದ ಪಾಲಿಗೆ ಅರ್ಧದಷ್ಟು ಜಮೀನು ಬರಬೇಕಿತ್ತು. ಆದರೆ ಮೂರು ತಲೆಮಾರುಗಳ 63 ವರ್ಷಗಳ ಕುಟುಂಬದ ಹೋರಾಟಕ್ಕೆ ಉಮರಾಣಿ ಗ್ರಾಮದ 63 ಎಕರೆ, ನಣದಿಯ 23 ಎಕರೆ ಹಾಗೂ ಕೆಂಪಟ್ಟಿಯ 20 ಎಕರೆ ಸೇರಿದಂತೆ ಒಟ್ಟು 106 ಎಕರೆ ಜಮೀನು ದೊರೆತಿದೆ. ಚಿಕ್ಕೋಡಿಯ ಈ ಪ್ರಕರಣ ಸುಪ್ರೀಂ ಕೋರ್ಟ್ ಪ್ರಕಟಿಸಿದ ಎ.ಐ.ಆರ್ ಪುಸ್ತಕದಲ್ಲಿ ದಾಖಲಾಗಿದೆ ಎಂದರು.

ಮುಖಂಡರಾದ ಅನಿಲ ಮಾನೆ, ಧವಲ ದೇಶಮುಖ, ಸಮೀರ ದೇಶಮುಖ, ಆದಿತ್ಯ ದೇಶಮುಖ, ಸೌರಭ ದೇಶಮುಖ, ಅಮಿತ ಪಾಲವ್, ಸೀಮಾ ಇಂಗಳೆ, ನೀತಾ ಪಾಟೀಲ, ಚಿತ್ರಾ ಕಾಟೆ, ಭಾಗ್ಯಶ್ರೀ ನಲವಡೆ, ಶಿವರಾಜ ದೇಶಮುಖ, ಸುಹಾಸ ದೇಶಮುಖ, ಸರಿತಾ ಗಾಡಗೆ, ಮೀರಾ ಸಾವಂತ, ಗೌರವ ದೇಶಮುಖ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.