ಹಂದಿಗುಂದ: ಪಟ್ಟಣದ ಮಹಾಕಾಳಿ ಫುಟಬಾಲ್ ಅಕಾಡೆಮಿ ಸಹಯೋಗದಲ್ಲಿ ‘ಮಹಾಕಾಳಿ ಚಾಂಪಿಯನ್ಸ್ ಟ್ರೋಫಿ–2021’ ರಾಷ್ಟ್ರಮಟ್ಟದ ಫುಟ್ಬಾಲ್ ಟೂರ್ನಿಯನ್ನು ಜ. 9ರಿಂದ 11ರವರೆಗೆ ಆಯೋಜಿಸಲಾಗಿದೆ. ವಿವಿಧ ರಾಜ್ಯಗಳ ತಂಡಗಳು ಪಾಲ್ಗೊಳ್ಳಲಿವೆ.

ಇಲ್ಲಿನ ಮಹಾಕಾಳಿ ಶಿಕ್ಷಣ ಸಂಸ್ಥೆಯ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಹಾಗೂ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಉದ್ಘಾಟಿಸುವರು. ಕೊಲ್ಹಾಪುರ ಸಂಸ್ಥಾನದ ಶ್ರೀಮಂತ ಮಾಲೋಜಿರಾಜೆ ಛತ್ರಪತಿ ಅಧ್ಯಕ್ಷತೆ ವಹಿಸುವರು. ವಿಧಾನಪರಿಷತ್ ಸದಸ್ಯ ವಿವೇಕರಾವ್ ಪಾಟೀಲ, ಶಾಸಕ ಮಹೇಶ ಕುಮಠಳ್ಳಿ, ಮಹಾಕಾಳಿ ದೇವಸ್ಥಾನ ಸಮಿತಿ ಅಧ್ಯಕ್ಷ ಜಿತೇಂದ್ರ ರಾಚೋಜಿರಾವ ಜಾಧವ (ಚಿಂಚಲಿಕರ), ಪಟ್ಟಣ ಪಂಚಾಯ್ತಿ ಅಧ್ಯಕ್ಷ ಮಹಾದೇವ ಪಟೋಳಕರ, ಹೆಸ್ಕಾಂ ಜಾಗೃತ ದಳದ ಎಸ್ಪಿ ರವಿಂದ್ರ ಗಡಾದೆ, ಬುಡಾ ವಿಶೇಷ ಭೂಸ್ವಾಧೀನ ಅಧಿಕಾರಿ ರವೀಂದ್ರ ಕರಲಿಂಗನ್ನವರ, ಕ್ರೀಡಾ ಇಲಾಖೆ ಉಪನಿರ್ದೇಶಕ ಎಚ್.ಕೋಳೆಕರ ಪಾಲ್ಗೊಳ್ಳುವರು.

ಗುರುವಾರ ನಡೆದ ಪೂರ್ವಸಿದ್ಧತೆಯನ್ನು ವಿವೇಕರಾವ ಪಾಟೀಲ ಪರಿಶೀಲಿಸಿದರು. ಕ್ರೀಡಾಪಟುಗಳೊಂದಿಗೆ ಮಾತುಕತೆ ನಡೆಸಿ, ಶುಭ ಹಾರೈಸಿದರು. ಮುಖಂಡರಾದ ರಾಜು ಬಣಗೆ, ನವೀನ ಪಟೇಕರಿ, ಅಜೀತ ದಂಡಾಪುರೆ, ಸಜೀತ ಪೂಜೇರಿ, ಆರ್ದಶ ಪೂಜೇರಿ, ಅಜೀತ ಪಾಟೀಲ, ತಮ್ಮಣ್ಣ ವಡ್ಡರ, ಅಕ್ಷಯ ಸೌದಲಗಿ, ಸಂಜು ಸೌದಲಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.