ಬೆಳಗಾವಿ: ‘ನರೇಗಾ ಯೋಜನೆಯಿಂದ ಮಹಾತ್ಮ ಗಾಂಧೀಜಿ ಹೆಸರನ್ನಷ್ಟೇ ಬದಲಿಸುತ್ತಿಲ್ಲ. ಬದಲಿಗೆ ಗಾಂಧಿ ವಿಚಾರಧಾರೆಗಳನ್ನೇ ಅಳಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ’ ಎಂದು ಎಐಸಿಸಿ ವಕ್ತಾರ ಅತುಲ್ ಲೋಂಡೆ ಆಪಾದಿಸಿದರು.

ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಹಿಂದೆ ಆಧಾರ್ ಗುರುತಿನ ಸಂಖ್ಯೆ ಜೋಡಣೆಯಾಗಿಲ್ಲ ಎಂದು ಹಲವರ ಹೆಸರನ್ನು ಕೇಂದ್ರ ತೆಗೆದುಹಾಕಿತ್ತು. ಈಗ ಯೋಜನೆಯಿಂದಲೇ ಗಾಂಧೀಜಿ ಹೆಸರು ತೆಗೆಯಲು ಮುಂದಾಗಿದೆ. ಮಾತ್ರವಲ್ಲ; ಅವರ ವಿಚಾರಧಾರೆಗಳನ್ನು ಅಳಿಸಲು ಪ್ರಯತ್ನಿಸುತ್ತಿರುವುದು ಸರಿಯಲ್ಲ’ ಎಂದು ದೂರಿದರು.

‘ಕರ್ನಾಟಕಕ್ಕೆ ಕೇಂದ್ರದಿಂದ ಬರಬೇಕಿರುವ ಜಿಎಸ್ಟಿ ಪಾಲು ಸಕಾಲಕ್ಕೆ ಸಿಗುತ್ತಿಲ್ಲ. ನರೇಗಾ ಯೋಜನೆಯಡಿ ₹1,400 ಕೋಟಿಗಿಂತ ಅಧಿಕ ಹಣವೂ ಬರಬೇಕಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.